ಪ್ರಬಲ ಭೂಕಂಪಕ್ಕೆ ತೈವಾನ್‌ನಲ್ಲಿ ಇಬ್ಬರ ಬಲಿ

ಸೋಮವಾರ, 3 ಜೂನ್ 2013 (09:42 IST)
PR
PR
ತೈವಾನ್‌ನಲ್ಲಿ ಭಾನುವಾರ ಸಂಭವಿಸಿದ 6.2 ತೀವ್ರತೆಯ ಪ್ರಬಲ ಭೂಕಂಪಕ್ಕೆ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು, 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯ ಕಾಲಮಾನ ಮಧ್ಯಾಹ್ಯದ 1:30 ರ ವೇಳೆಗೆ ಕೇಂದ್ರ ತೈವಾನ್‌ನ ಬುಲಿ ಪಟ್ಟಣದ ಆಗ್ನೇಯಕ್ಕೆ ಸುಮಾರು 22 ಕಿ.ಮೀ. ದೂರದಲ್ಲಿ ಭೂಕಂಪ ಸಂಭವಿಸಿದ್ದು, 20 ಕಿ.ಮೀ. ಆಳದಲ್ಲಿ ಕೇಂದ್ರೀಕೃತಗೊಂಡಿತ್ತು ಎಂದು ಅಮೆರಿಕದ ಭೂಗರ್ಭ ಸರ್ವೇಕ್ಷಣಾಲಯದ ವರದಿ ತಿಳಿಸಿದೆ.

ತೈವಾನ್ ದ್ವೀಪದ ಬಹುತೇಕ ಎಲ್ಲ ಕಡೆ ಕಂಪನವು ಅನುಭವಕ್ಕೆ ಬಂದಿದ್ದು, ಜನರು ಭೀತಿಯಿಂದ ತಮ್ಮ ಮನೆಗಳಿಂದ ಹೊರಗೋಡುತ್ತಿದ್ದ ದೃಶ್ಯ ಕಂಡು ಬಂದಿರುವುದಾಗಿ ವರದಿಗಳು ತಿಳಿಸಿವೆ.

ಹಾಂಗ್‌ಕಾಂಗ್‌ನಲ್ಲೂ ಭೂಕಂಪ ಅನುಭವಕ್ಕೆ ಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೂ ಮೊದಲು ಶನಿವಾರ ಫಿಲಿಪ್ಪೀನ್ಸ್‌ನಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿದ್ದು, 33 ಜನ ಗಾಯಗೊಂಡಿದ್ದರು. ಈ ಕಂಪನವು ತೈವಾನ್‌ನ ರಾಜಧಾನಿ ತೈಪೆಯಿಂದ ಸುಮಾರು 250 ಕಿ.ಮೀ. ದೂರದಲ್ಲಿ ಕೇಂದ್ರೀಕರಿಸಿತ್ತು ಎಂದು ಸ್ಥಳೀಯ ಹವಾಮಾನ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ