ಪ್ರಬಲ ಭೂಕಂಪಕ್ಕೆ ನಡುಗಿದ ಜಪಾನ್‌

ಶನಿವಾರ, 28 ಜನವರಿ 2012 (10:37 IST)
ಪೂರ್ವ ಜಪಾನ್‌ನಲ್ಲಿ ಶನಿವಾರ ಬೆಳಗ್ಗೆ 5.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಯಾವುದೇ ಸಾವು ನೋವಿನ ಬಗ್ಗೆ ಮಾಹಿತಿ ದೊರೆತಿಲ್ಲ ಹಾಗೂ ಸುನಾಮಿ ಮುನ್ಸೂಚನೆಯನ್ನೂ ಸಹಾ ನೀಡಲಾಗಿಲ್ಲ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಟೋಕಿಯಾದ ಪಶ್ಚಿಮ ಭಾಗದಲ್ಲಿರುವ ಯಾಮಾನಾಶಿಯಲ್ಲಿರುವ ಸಮುದ್ರದ 20 ಕಿಲೋ ಮೀಟರ್‌ ಆಳದಲ್ಲಿ ಭೂಕಂಪ ಕೇಂದ್ರೀಕೃತವಾಗಿತ್ತು ಎಂದು ಜಪಾನ್‌ ಹವಾಮಾನ ಇಲಾಖೆ ತಿಳಿಸಿದೆ.

ಜಪಾನ್‌ ರಾಜಧಾನಿ ಟೋಕಿಯೋದಲ್ಲಿ ಬೆಳಗ್ಗೆ 7:43ಕ್ಕೆ ಭೂಪಂಕ ಸಂಭವಿಸಿದೆ.

ಜಪಾನ್‌ನಲ್ಲಿ ಭೂಕಂಪ ಸಾಮಾನ್ಯವಾಗಿದ್ದು, ವಿಶ್ವದಲ್ಲಿ ನಡೆಯುವ ಶೇ.20ರಷ್ಟು ಭೂಕಂಪಗಳು ಜಪಾನಿನಲ್ಲೇ ನಡೆಯುತ್ತಿದ್ದು, ಭೂಕಂಪದ ತೀವ್ರತೆ ರಿಕ್ಟರ್‌ ಮಾಪಕದಲ್ಲಿ 6 ಅಥವಾ ಅದಕ್ಕಿಂತಾ ಹೆಚ್ಚಾಗಿರುತ್ತದೆ. ಭೂಕಂಪ ಹಾಗೂ ಸುನಾಮಿಯಿಂದಾಗಿ ಈ ವರೆಗೂ 23ಸಾವಿರ ಜನರು ನಾಪತ್ತೆಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ