ಪ್ರಾಚೀನಕಾಲದ ಡೈನೊಸಾರ್ ಹೆಜ್ಜೆಗುರುತು ಪತ್ತೆ

ಮಂಗಳವಾರ, 10 ನವೆಂಬರ್ 2009 (12:50 IST)
ಪುರಾತನಶಾಸ್ತ್ರಜ್ಞರು ನ್ಯೂಜಿಲೆಂಡ್ ದಕ್ಷಿಣ ದ್ವೀಪದಲ್ಲಿ ಡೈನಾಸರ್‌ಗಳ ಪ್ರಥಮ ಕುರುಹಾದ 70 ದಶಲಕ್ಷ ವರ್ಷಗಳ ಹಿಂದಿನ ಹೆಜ್ಜೆಗುರುತನ್ನು ಪತ್ತೆಹಚ್ಚಿದ್ದಾರೆ. ಪ್ರಾಚೀನ ನ್ಯೂಜಿಲೆಂಡ್‌ನಲ್ಲಿ ಡೈನಾಸರ್‌ಗಳು ಪತ್ತೆಯಾಗಿವೆಯೆಂದು ಪಳೆಯುಳಿಕೆಗಳ ಶೋಧಕರಿಗೆ ಅರಿವಿದ್ದು, ಅದಕ್ಕೆ ಜೀಲೆಂಡಿಯ ಎಂದು ಉಲ್ಲೇಖಿಸುತ್ತಿದ್ದರು.

ಜಿಎನ್‌ಎಸ್ ಸೈನ್ಸ್‌ನ ಗ್ರೆಗ್ ಬ್ರೌನ್ ನೇತೃತ್ವದ ತಂಡವು ವಾಯವ್ಯ ನೆಲ್ಸನ್ ಪ್ರದೇಶದಲ್ಲಿ ಕಲ್ಲುಗಳು ಮತ್ತು ರಾಡಿ ರಚನೆಗಳ ಲಕ್ಷಣಗಳನ್ನು ಅಭ್ಯಸಿಸುತ್ತಿದ್ದಾಗ ಡೈನೊಸಾರ್ ಹೆಜ್ಜೆಗುರುತುಗಳನ್ನು ಪತ್ತೆಹಚ್ಚಿತು. 10 ಕಿಮೀ ವ್ಯಾಪ್ತಿಯ 10 ಕಡೆಗಳಲ್ಲಿ ಡೈನೊಸಾರ್ ಹೆಜ್ಜೆಗುರುತುಗಳು ಪತ್ತೆಯಾಗಿವೆ.

ವಿಶ್ವದ ಇತರೆ ಭಾಗಗಳಲ್ಲಿ ಇಷ್ಟೇ ಪ್ರಾಚೀನ ಕಲ್ಲುಗಳಲ್ಲಿ ಡೈನೊಸಾರ್ ಹೆಜ್ಜೆಗುರುತುಗಳನ್ನು ಹೋಲಿಸಿದಾಗ ಈ ಹೆಜ್ಜೆಗುರುತುಗಳನ್ನು ಉದ್ದದ ಕುತ್ತಿಗೆಗಳು ಮತ್ತು ಬಾಲಗಳಿರುವ ಹಾಗೂ ಕಂಬದ ರೀತಿ ಕಾಲುಗಳಿದ್ದ ದೊಡ್ಡ ಶಾಕಾಹಾರಿ ಡೈನೋಸಾರ್‌ಗಳದ್ದೆಂದು ತೀರ್ಮಾನಕ್ಕೆ ಬರಲಾಯಿತು.

ವೆಬ್ದುನಿಯಾವನ್ನು ಓದಿ