ಫಾತ್ರೆ ಬಾರಿಸಿ ರಾಷ್ಟ್ರಪತಿ ವಿರುದ್ದ ಹೋರಾಟ

ಭಾನುವಾರ, 9 ಮಾರ್ಚ್ 2014 (11:58 IST)
PR
ಕರಾಕಸ್ : ಆಹಾರ ಸಮಸ್ಯೆಯಿಂದ ವೆನೆಜುಎಲಾ ದೇಶದ ಕರಾಕಸ ನಗರದಲ್ಲಿ ಜನರು ಪಾತ್ರೆ ಬಾರಿಸಿ ರಾಷ್ಟ್ರಪತಿಯವರ ವಿರುದ್ದ ಹೋರಾಟ ಮಾಡಿದ ಘಟನೆಯೊಂದು ನಡೆದಿದೆ.

ಆಂತರಾಷ್ಟ್ರೀಯ ಮಹಿಳಾ ದಿವಸದಂದು ನಡೆದ ಈ ಪ್ರದರ್ಶನದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಆಹಾರ ಸಮ್ಯಸೆಯಿಂದ ದೇಶದಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ವಿರುದ್ದ ಪಾತ್ರೆ ಬಾರಿಸಿ ಪ್ರತಿಭಟನೆ ನಡೆಸಲಾಗಿದೆ.

ಈ ರ್ಯಾಲಿಯ ನೇತೃತ್ವವನ್ನು ವಿರೋಧ ಪಕ್ಷದ ನಾಯಕ ಮತ್ತು ರಾಷ್ಟ್ರಪತಿ ಚುನಾವಣೆಯಲ್ಲಿ ಎರಡು ಬಾರಿ ಎರಡನೇ ಸ್ಥಾನದಲ್ಲಿದ್ದ ಹೆನರಿಕ್‌ ಖೈಪ್ರಿಲೆಸ್‌ ವಹಿಸಿದ್ದರು. 2013ರಲ್ಲಿ ನಡೆದ ಚುಣಾವಣೆಯಲ್ಲಿ ಮಾದುರೇ ವಿರುದ್ದ ಸೋಲನ್ನು ಅನುಭವಿಸಿದ್ದರು.

ವೆಬ್ದುನಿಯಾವನ್ನು ಓದಿ