ಫೇಸ್‌ಬುಕ್ ಬ್ರೌಸ್ ಮಾಡ್ತಿದ್ದ ಮಹಿಳೆ ಸೇತುವೆಯಿಂದ ನೀರಿಗೆ ಬಿದ್ದಳು

ಗುರುವಾರ, 19 ಡಿಸೆಂಬರ್ 2013 (19:08 IST)
PR
PR
ಸಿಡ್ನಿ: ಎಚ್ಚರ ಸೇತುವೆ ಅಥವಾ ನೀರಿನ ಬಳಿ ಫೇಸ್‌ಬುಕ್ ಅಥವಾ ಯಾವುದೇ ಸಾಮಾಜಿಕ ತಾಣ ಬ್ರೌಸ್ ಮಾಡ್ಬೇಡಿ, ಏಕೆಂದರೆ ಸ್ವಲ್ಪ ಎಚ್ಚರತಪ್ಪಿದರೆ ನೀರಿಗೆ ಬೀಳಬಹುದು. ಹೀಗೊಂದು ಘಟನೆ ಆಸ್ಟ್ರೇಲಿಯಾದಲ್ಲಿ ಸಂಭವಿಸಿದೆ. ಮೊಬೈಲ್‌ನಲ್ಲಿ ಫೇಸ್‌ಬುಕ್ ಬ್ರೌಸಿಂಗ್ ಮಾಡುತ್ತಿದ್ದ ಆಸ್ಟ್ರೇಲಿಯಾದ ಮಹಿಳಾ ಪ್ರವಾಸಿಯೊಬ್ಬರು ಸೇತುವೆಯಿಂದ ಕೆಳಗೆ ಹರಿಯುತ್ತಿದ್ದ ಸಮುದ್ರದ ನೀರಿಗೆ ದೊಪ್ಪನೆ ಬಿದ್ದ ಘಟನೆ ಬುಧವಾರ ಸಂಭವಿಸಿದೆ. ಮೆಲ್ಬೋರ್ನ್‌ನಲ್ಲಿ ಫೇಸ್‌ಬುಕ್ ಸಂದೇಶವೊಂದರಿಂದ ಆತಂಕಿತಳಾದ ಮಹಿಳೆ ಎಚ್ಚರತಪ್ಪಿ ಸೀದಾ ಸೇತುವೆಯಿಂದ ನೀರಿಗೆ ದೊಪ್ಪನೆ ಬಿದ್ದಳು.

ಪ್ರತ್ಯಕ್ಷದರ್ಶಿಯೊಬ್ಬರು ನೆರವಿಗೆ ಕರೆ ನೀಡಿದಾಗ ಪೊಲೀಸರು ಮಹಿಳೆಯ ನೆರವಿಗೆ ಧಾವಿಸಿದರು. ಸೇತುವೆಯ ಕೆಳಗೆ 65 ಅಡಿ ಆಳದಲ್ಲಿ ನೀರಿನ ಮೇಲೆ ಬಿದ್ದಿದ್ದ ಅವಳು ತೇಲುವ ಸ್ಥಿತಿಯಲ್ಲಿ ನೀರಿನಲ್ಲಿದ್ದು, ಮೊಬೈಲ್ ಕೈನಲ್ಲೇ ಹಿಡಿದಿದ್ದಳು. ನಂತರ ತನ್ನ ತಪ್ಪಿಗೆ ಕ್ಷಮೆ ಯಾಚಿಸಿದಳು. ಪೊಲೀಸರು ಅವಳನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದರು.

ವೆಬ್ದುನಿಯಾವನ್ನು ಓದಿ