ಫೇಸ್ ಬುಕ್ ಖಾತೆ ಬಳಸಿದ್ದಕ್ಕೆ ಕಲ್ಲಿನಿಂದ ಹೊಡೆದು ಯುವತಿಯನ್ನು ಸಾಯಿಸಿದ ಮತಾಂಧರು

ಶನಿವಾರ, 15 ಫೆಬ್ರವರಿ 2014 (17:33 IST)
PTI
ಫೇಸ್ ಬುಕ್ ಖಾತೆಯನ್ನು ಬಳಸಿದ ಯುವತಿಯನ್ನು ಸುನ್ನಿ ಉಗ್ರಗಾಮಿಗಳು ಕಲ್ಲಿನಿಂದ ಹೊಡೆದು ಸಾಯಿಸಿದ ಘಟನೆ ಸಿರಿಯಾದಲ್ಲಿ ನಡೆದಿದೆ.

ಸಾಮಾಜಿಕ ತಾಣ ಬಳಸಿ ಸಿಕ್ಕಿಹಾಕಿಕೊಂಡ ನಂತರ ಫಾತೋಮ್ ಅಲ್ ಜಾಸ್ಸಿಮ್‌ಳನ್ನು ಷರಿಯಾ ಕೋರ್ಟ್‌ಗೆ ಕರೆದೊಯ್ಯಲಾಯಿತು. ಫೇಸ್ ಬುಕ್ ಖಾತೆಯನ್ನು ಬಳಸಿದ್ದು ವ್ಯಭಿಚಾರಕ್ಕೆ ಸಮ. ಅವಳಿಗೆ ಕಲ್ಲು ಹೊಡೆದು ಸಾಯಿಸಬೇಕು ಎಂದು ಷರಿಯಾ ನ್ಯಾಯಾಲಯ ಘೋಷಿಸಿತು.ಇರಾನ್ ಫಾರ್ಸ್ ಸುದ್ದಿ ಸಂಸ್ಥೆ ಅರೇಬಿಕ್ ಭಾಷೆ ಅಲ್ ರೈ ಅಲ್ ಯುಮ್ ನಲ್ಲಿ ಈ ವರದಿಯನ್ನು ಪ್ರಕಟಿಸಿದೆ.

ಇರಾಕ್ ಮತ್ತು ಸಿರಿಯಾ ಇಸ್ಲಾಮಿಕ್ ರಾಜ್ಯ (ಐಸಿಸ್) ಎಂದು ಸಹ ಗುರುತಿಸಲ್ಪಡುವ ಇರಾಕ್ ನ ಅಲ್ ಖೈದಾ ಗುಂಪಿನ ಸದಸ್ಯರು ಈ ಘಟನೆಯ ಹಿಂದೆ ಇದ್ದಾರೆ.

ಇರಾಕ್ ಮತ್ತು ಸಿರಿಯಾ ಇಸ್ಲಾಮಿಕ್ ರಾಜ್ಯ (ಐಸಿಸ್), ಇರಾಕ್ ನಲ್ಲಿರುವ ಕಟ್ಟುನಿಟ್ಟಾದ ಇಸ್ಲಾಮಿಕ್ ಗುಂಪಾಗಿದ್ದು ಸಿರಿಯಾದಲ್ಲಿ , ಸಿರಿಯನ್ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಮತ್ತು ಇರಾಕ್ ಸರ್ಕಾರದ ಪಡೆಗಳ ವಿರುದ್ಧ ಸಕ್ರಿಯ ಯುದ್ಧ ಹೋರಾಟ ಮಾಡುತ್ತಿದೆ.

ಈ ಗುಂಪಿನ ಸಿದ್ಧಾಂತ ಇಸ್ಲಾಂ ಧರ್ಮದ ಅತ್ಯಂತ ಕಟ್ಟುನಿಟ್ಟಾದ ವ್ಯಾಖ್ಯಾನದ ಮೇಲೆ ಆಧಾರಿತವಾಗಿದೆ.

ವಿಪರ್ಯಾಸವೆಂದರೆ, ಅಲ್ ನುಸ್ರಾ ಫ್ರಂಟ್ ತನ್ನದೇ ಆದ ಫೇಸ್ಬುಕ್ ಖಾತೆಯನ್ನು ಹೊಂದಿದೆ.

ವೆಬ್ದುನಿಯಾವನ್ನು ಓದಿ