ಬಾಂಗ್ಲಾದಲ್ಲಿ ಸಾವಿರಾರು ಮಂದಿ ಸ್ಥಳಾಂತರ

ಸೋಮವಾರ, 25 ಮೇ 2009 (17:38 IST)
ಬಂಗಾಳಕೊಲ್ಲಿಯನ್ನು ಅಪ್ಪಳಿಸಿರುವ ಚಂಡಮಾರುತವು ಬಾಂಗ್ಲಾದೇಶದ ನೈರುತ್ಯ ಕರಾವಳಿಯತ್ತ ಸಾಗುತ್ತಿದ್ದು, ಇಲ್ಲಿನ ಸಾವಿರಾರು ಮಂದಿ ನಿವಾಸಿಗಳನ್ನು ತುರ್ತು ಆಶ್ರಯ ತಾಣಗಳಿಗೆ ಸ್ಥಳಾಂತರಿಸಲಾಗುತ್ತಿದೆ.

ಶರವೇಗದಲ್ಲಿ ಬೀಸುತ್ತಿರುವ ಐಲಾ ಚಂಡಮಾರುತದಿಂದಾಗಿ ರಾಕ್ಷಸಗಾತ್ರದ ಅಲೆಗಳು ಅಪ್ಪಳಿಸುತ್ತಿದೆ. ಇದರಿಂದಾಗಿ ಪ್ರವಾಹ ನಿಯಂತ್ರಣ ತಡೆಗೋಡೆಗಳಿಗೆ ಹಾನಿಯುಂಟಾಗಿದೆ ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಹವಾಮಾನ ಇಲಾಖಾ ಅಧಿಕಾರಿಗಳು ಅಪಾಯ ಸೂಚಕ ಸಂಖ್ಯೆ 7ನ್ನು ಘೋಷಿಸಿದ್ದಾರೆ. ನೈರುತ್ಯ ಮೊಂಗ್ಲಾ ಬಂದರಿನಲ್ಲಿ ಈ ಹಿಂದೆ ನೀಡಲಾಗಿದ್ದ ಅಪಾಯ ಸರಣಿ ಸಂಖ್ಯೆ ಆರನ್ನು ಪರಿಷ್ಕರಿಸಿ ಏಳನ್ನು ಘೋಷಿಸಲಾಗಿದೆ.

ವೆಬ್ದುನಿಯಾವನ್ನು ಓದಿ