ಬಾಂಗ್ಲಾ: ಜಿಯಾಗೆ ಬಂಧ ಮುಕ್ತಿ

ಭ್ರಷ್ಟಾಚಾರ ಆರೋಪ ಹೊತ್ತು ಸುಮಾರು ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಜೈಲಿನಲ್ಲಿ ಕೊಳೆಯುತ್ತಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲಿದಾ ಜಿಯಾ ಅವರಿಗೆ ಜಾಮೀನು ಲಭಿಸಿದೆ ಎಂದು ಅವರ ವಕೀಲರು ತಿಳಿಸಿದ್ದಾರೆ.

ಜಿಯಾ ಎದುರಿಸುತ್ತಿರುವ ಎರಡೂ ಪ್ರಕರಣಗಳಿಗೆ ಮೂರು ತಿಂಗಳ ಜಾಮೀನು ಲಭ್ಯವಾಗಿದ್ದು ಅವರು ಬುಧವಾರ ಬಿಡುಗಡೆ ಹೊಂದಲಿದ್ದಾರೆ ಎಂದು ಜಿಯಾರನ್ನು ಪ್ರತಿನಿಧಿಸುತ್ತಿರುವ ವಕೀಲ ನಾದಿರ್ ಉದ್ದಿನ್ ಅಮೀರ್ ತಿಳಿಸಿದ್ದಾರೆ.

ಸಂಧಿವಾತ ಮತ್ತು ಕಾಲು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಜಿಯಾರನ್ನು ವೈದ್ಯಕೀಯ ಪರೀಕ್ಷೆಗಾಗಿ ವಿದೇಶಕ್ಕೆ ಕಳುಹಿಸಲು ಸರಕಾರ ನಿರ್ಧರಿಸಿತ್ತು. ಅವರು ಪ್ರಾಥಮಿಕ ಚಿಕಿತ್ಸೆಯನ್ನು ಢಾಕಾದಲ್ಲಿ ಪಡೆದುಕೊಂಡಿದ್ದರು. ವಿದೇಶಕ್ಕೆ ಚಿಕಿತ್ಸೆಗೆ ತೆರಳುವ ಕುರಿತು ಜಿಯಾ ಇನ್ನಷ್ಟೆ ನಿರ್ಧರಿಸಲಿದ್ದಾರೆ ಎಂದು ವಕೀಲರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ