ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಭಾರತೀಯನಿಗೆ 10 ವರ್ಷ ಸೆರೆವಾಸ

ಸೋಮವಾರ, 31 ಮಾರ್ಚ್ 2014 (18:54 IST)
ದುಬೈ:9 ವರ್ಷ ವಯಸ್ಸಿನ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಭಾರತೀಯ ವ್ಯಕ್ತಿಯೊಬ್ಬನಿಗೆ ಬಹರೇನ್ ಕೋರ್ಟ್ 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಶೀತಲಾಗಾರದ ನೌಕರನಾಗಿದ್ದ ಭಾರತೀಯ ರೀಫಾ ನಗರದ ಅಂಗಡಿಯಲ್ಲಿ ಭಾರತೀಯ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಆರೋಪಿಸಲಾಗಿದೆ. ಬಾಲಕ ಮೊಸರು ಖರೀದಿಸಲು ಅಂಗಡಿಗೆ ಬಂದಿದ್ದಾಗ ಅಂಗಡಿಯ ನೌಕರನಾಗಿದ್ದ ಭಾರತೀಯ ಬಾಲಕನನ್ನು ಒಳಕ್ಕೆ ಕರೆದು ಬಟ್ಟೆಗಳನ್ನು ಬಿಚ್ಚಿ ಲೈಂಗಿಕ ದೌರ್ಜನ್ಯ ಎಸಗಿದ.

ದುಷ್ಕರ್ಮಿ ನಂತರ ಕೋರ್ಟ್‌ನಲ್ಲಿ ತನ್ನ ಕೃತ್ಯವನ್ನು ಒಪ್ಪಿಕೊಂಡು, ನಮ್ಮ ಮನಸ್ಸಿನಲ್ಲಿ ದೆವ್ವ ಹೊಕ್ಕು, ಆ ಕೆಲಸ ಮಾಡುವಂತೆ ಪ್ರಚೋದಿಸಿತೆಂದು ಹೇಳಿದ್ದಾನೆ. ಬಾಲಕನ ಕುಟುಂಬ ದುಷ್ಕರ್ಮಿಯ ವಿರುದ್ಧ ಆರೋಪಗಳನ್ನು ಕೈಬಿಟ್ಟಿದ್ದರೂ, ಕೋರ್ಟ್ ವಿಚಾರಣೆ ಮುಂದುವರಿಸಿತು. ಇಂತಹ ಕೃತ್ಯಗಳಿಂದ ನಮ್ಮ ಮಕ್ಕಳನ್ನು ರಕ್ಷಿಸುವ ಅಗತ್ಯ ಸಮಾಜದಲ್ಲಿ ಕಂಡುಬಂದಿದೆ ಎಂದು ನ್ಯಾಯಾಧೀಶರು ಹೇಳಿದರು.

ವೆಬ್ದುನಿಯಾವನ್ನು ಓದಿ