ಬಾಲಕಿಯ ಮೇಲೆ ರೇಪ್ ಮಾಡಿದ ಬಾಲಕನಿಗೆ ಪಶ್ಚಾತ್ತಾಪವೇ ಇಲ್ಲವಂತೆ!

ಸೋಮವಾರ, 31 ಮಾರ್ಚ್ 2014 (16:27 IST)
ನೋರ್‌ಫೋಲ್ಕ್: 6 ವರ್ಷ ವಯಸ್ಸಿನ ಮುಗ್ಧ ಬಾಲಕಿಯನ್ನು ಎರಡು ಬಾರಿ ರೇಪ್ 12 ವರ್ಷ ವಯಸ್ಸಿನ ಶಾಲಾ ಬಾಲಕನನ್ನು ನೀನು ರೇಪ್ ಮಾಡಿದ ಬಾಲಕಿ ಸಂಕಟ ಪಡುತ್ತಿರುವುದನ್ನು ಕಂಡು ನಿನ್ನ ಮನಸ್ಸಿಗೆ ನೋವಾಗಿಲ್ಲವೇ ಎಂದು ಪ್ರಶ್ನಿಸಿದಾಗ ಬಾಲಕ ಸ್ವಲ್ಪವೂ ಪಶ್ಚಾತ್ತಾಪ ವ್ಯಕ್ತಪಡಿಸದೇ 'ಐ ಡೋಂಟ್ ಕೇರ್' ಎಂದು ಹೇಳಿ ಕೋರ್ಟ್‌ನಿಂದ ಮುಕ್ತವಾಗಿ ಬಿಡುಗಡೆಯಾದ. ಕಾನೂನಿನ ಕಾರಣಗಳಿಂದ ಬಾಲಕನ ಹೆಸರನ್ನು ಮುಚ್ಚಿಡಲಾಗಿದ್ದು, ಬಾಲಕಿಯ ಮೇಲೆ ಎರಡು ಸಂದರ್ಭಗಳಲ್ಲಿ ಅತ್ಯಾಚಾರ ನಡೆಸಿದ್ದಾಗಿ ಒಪ್ಪಿಕೊಂಡಿದ್ದಾನೆ.

ಆದರೆ ಕೋರ್ಟ್ ಅಧಿಕಾರಿಯ ಜತೆ ಭೇಟಿಯಲ್ಲಿ ಬಾಲಕ ತನ್ನ ಅಪರಾಧಕ್ಕೆ ಯಾವುದೇ ಪಶ್ಚಾತ್ತಾಪ ವ್ಯಕ್ತಪಡಿಸಲಿಲ್ಲ. ಜಿಲ್ಲಾ ನ್ಯಾಯಾಧೀಶೆ ಸೀಲೀಯಾ ಡಾಸನ್, ಬಾಲಕನನ್ನು ತಾನು ಯುವ ಅಪರಾಧ ಘಟಕಕ್ಕೆ ಕಳಿಸುವುದಿಲ್ಲ. ಏಕೆಂದರೆ ಅಲ್ಲಿ ಹೆಚ್ಚು ನುರಿತ ಕ್ರಿಮಿನಲ್‌ಗಳ ಜತೆ ಬಿಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ವೆಬ್ದುನಿಯಾವನ್ನು ಓದಿ