ಬೀಜಿಂಗ್: ಭಾರತ ಚೀನಾ ಮಾತುಕತೆ

ಮಂಗಳವಾರ, 13 ನವೆಂಬರ್ 2007 (14:58 IST)
ಉಭಯ ರಾಷ್ಟ್ರಗಳ ನಡುವೆ ಸೇನಾ ಸಹಕಾರ ವೃದ್ಧಿಸುವುದು ಹಾಗೂ ಪರಸ್ಪರ ವಿಶ್ವಾಸವನ್ನು ಹೆಚ್ಚಿಸುವುದನ್ನು ಪ್ರಮುಖ ಗುರಿಯಾಗಿಸಿಕೊಂಡು ಭಾರತ ಹಾಗೂ ಚೀನಾ ರಾಷ್ಟ್ರಗಳು ಇದೇ ಮೊದಲ ಬಾರಿಗೆ ರಕ್ಷಣಾ ಹಾಗೂ ಭದ್ರತಾಮಟ್ಟದ ಮಾತುಕತೆಯನ್ನು ಬೀಜಿಂಗ್‌ನಲ್ಲಿ ಸೋಮವಾರದಿಂದ ಆರಂಭಿಸಿವೆ.


ಮೇ 2006 ರಲ್ಲಿ ಉಭಯ ರಾಷ್ಟ್ರಗಳ ನಡುವೆ ಏರ್ಪಟ್ಟ ರಕ್ಷಣಾ ಸಹಕಾರ ವೃದ್ಧಿಯ ಮೇಲೆ ಮಾಡಿಕೊಳ್ಳಲಾಗಿರುವ ತಿಳುವಳಿಕಾ ಪತ್ರದೊಂದಿಗೆ ಭಾರತ ರಕ್ಷಣಾ ಸಚಿವಾಲಯದ ಕಾರ್ಯದರ್ಶಿ ಬಿಮಲ್ ಜುಲ್ಕಾ ಅವರೊಂದಿಗೆ ಚೀನಾದ ಪೀಪಲ್ಸ್ ಲಿಬರೇಶನ್ ಸೇನಾ ಸಿಬ್ಬಂದಿ ಮುಖ್ಯಸ್ಥ ಚೆನ್ ಬಿಂಗ್ಡ್ ಅವರು ಜಂಟಿ ಮಾತುಕತೆ ನಡೆಸಿದರು.


ಭಾರತ-ಚೀನಾಗಳ ಸಂಬಂಧವು ಹೊಸ ಅವಧಿಯತ್ತ ದಾಪುಗಾಲನ್ನು ಹಾಕಿದೆ. ಇದು ಉಭಯ ರಾಷ್ಟ್ರಗಳ ನಡುವೆ ಸ್ನೇನಯುತ ಸೇನಾ ಸಹಕಾರಕ್ಕೆ ಕಾರಣವಾಗಲಿದೆ ಎಂದು ಕೇಂದ್ರೀಯ ಸೇನಾ ಆಯೋಗದ ಸದಸ್ಯರೂ ಆಗಿರುವ ಚೆನ್ ಹೇಳಿದರು.


ತಂತ್ರಗಳ ಕಾರ್ಯಚೌಕಟ್ಟಿನಲ್ಲಿ ರಕ್ಷಣಾ ಸಹಕಾರವನ್ನು ಬಲಪಡಿಸುವುದು ಹಾಗೂ ಪಾಲುದಾರಿಕೆ ಸಹಕಾರ ಮತ್ತು ಭಾರತ ಹಾಗೂ ಚೀನಾಗಳ ಅಭ್ಯುದಯಕ್ಕಾಗಿ ಎರಡೂ ರಾಷ್ಟ್ರಗಳ ಸೇನೆಯು ತಮ್ಮ ಸಾಮರ್ಥ್ಯವನ್ನು ಹಂಚಿಕೊಳ್ಳುವುದು ಒಳಗೊಂಡಂತೆ ಇತರ ಚರ್ಚೆ ಇಲ್ಲಿ ನಡೆಸಲಾಯಿತು ಎಂದು ಚೆನ್ ವಿವರಿಸಿದರು.


ಪರಸ್ಪರ ಗೌರವಿಸುವಿಕೆ ಹಾಗೂ ಸೇನಾ ಬಲವರ್ಧನೆಯನ್ನು ಉತ್ತೇಜಿಸುವು ಸಂಬಂಧ ಭಾರತವು ಚೀನಾದೊಂದಿಗೆ ಕಾರ್ಯನಿರ್ವಹಿಸಲು ಇಚ್ಛೆ ಪಡುತ್ತದೆ. ಜೊತೆಗೆ ಚೀನಾದ ಏಕಮಯ ನೀತಿಗೆ ನವದೆಹಲಿಯ ಬದ್ಧವಾಗಿದೆ ಎಂದು ಜುಲ್ಕಾ ಹೇಳಿದರು.

ವೆಬ್ದುನಿಯಾವನ್ನು ಓದಿ