ಬ್ರೇನ್ ಡೆಡ್ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದಳು

ಬುಧವಾರ, 12 ಫೆಬ್ರವರಿ 2014 (18:46 IST)
PR
PR
ಮಾಂಟ್ರಿಯಲ್: ಮೆದುಳು ನಿಷ್ಕ್ರಿಯಗೊಂಡ (ಬ್ರೇನ್ ಡೆಡ್) ಮಹಿಳೆ ಆರೋಗ್ಯಕರ ಗಂಡುಮಗುವಿಗೆ ಜನ್ಮ ನೀಡಿದ ಘಟನೆ ಕೆನಡಾದಲ್ಲಿ ವರದಿಯಾಗಿದೆ. ಮೆದುಳು ಸತ್ತ ಆ ಮಹಿಳೆಗೆ ಅನೇಕ ವಾರಗಳ ಕಾಲ ಜೀವರಕ್ಷಕ ವ್ಯವಸ್ಥೆ ಅಳವಡಿಸಲಾಗಿತ್ತು.ಮಗುವಿನ ತಂದೆ 32 ವರ್ಷ ವಯಸ್ಸಿನ ಡೈಲಾನ್ ಬೆನ್ಸನ್ ತನ್ನ ವೈಯಕ್ತಿಕ ದುರಂತದ ಆನ್‌ಲೈನ್ ಮಾಹಿತಿ ನೀಡುತ್ತಿದ್ದು, ತನ್ನ ಪತ್ನಿಗಾಗಿ ದುಃಖಿಸುತ್ತಾ, ತನ್ನ ಭಾವನೆಗಳನ್ನು ಬಿಚ್ಚಿಟ್ಟಿದ್ದರು ಮತ್ತು ಮಗುವಿನ ಜನ್ಮಕ್ಕೆ ಸಿದ್ಧತೆ ನಡೆಸಿದ್ದರು. ಮಹಿಳೆಯ ಗರ್ಭವನ್ನು 34 ತಿಂಗಳ ಕಾಲ ಇರಿಸುವ ಆಶಾಭಾವನೆ ಹೊಂದಿದ್ದ ವೈದ್ಯರು 28 ವಾರಗಳ ನಂತರ ಸಿಸೇರಿಯನ್ ಶಸ್ತ್ರಚಿಕಿತ್ಸೆ ಮೂಲಕ ಗಂಡುಮಗುವನ್ನು ಹೊರತೆಗೆದರು.ಶನಿವಾರ ಸಂಜೆ, ನನ್ನ ಸುಂದರ, ಅಚ್ಚರಿಯ ಮಗ ಐವರ್ ಕೊಹೆನ್ ಬೆನ್ಸನ್ ಹುಟ್ಟಿದ್ದಾನೆ ಎಂದು ಬ್ಲಾಗ್ ಪೋಸ್ಟ್‌ನಲ್ಲಿ ಬೆನ್ಸನ್ ಬರೆದಿದ್ದಾರೆ.

ಮಗು ಹುಟ್ಟಿದ ಮಾರನೇ ದಿನವೇ ವೈದ್ಯರು ಜೀವರಕ್ಷಕ ಯಂತ್ರದ ಸಂಪರ್ಕ ಕಡಿದುಹಾಕಿದ ಬಳಿಕ ಮಹಿಳೆ ಮೃತಪಟ್ಟರು. ಭಾನುವಾರ ನಾನು ಅತ್ಯಂತ ಪ್ರಬಲ ಮತ್ತು ಅದ್ಭುತ ಮಹಿಳೆಗೆ ಗುಡ್‌ಬೈ ಹೇಳಬೇಕಾಗಿದೆ ಎಂದು ಅವರು ಬರೆದಿದ್ದಾರೆ.32 ವರ್ಷ ವಯಸ್ಸಿನ ರಾಬಿನ್ ಬೆನ್ಸನ್ 22 ವಾರಗಳ ಗರ್ಬಿಣಿಯಾಗಿದ್ದಾಗ ರಕ್ತಸ್ರಾವದಿಂದ ಬ್ರೇನ್ ಡೆಡ್ ಎಂದು ಘೋಷಿಸಲಾಯಿತು.

ಐವರ್ ವೈದ್ಯಕೀಯ ವೆಚ್ಚಗಳಿಗಾಗಿ ಕೆನಡಾ 152, 000 ಡಾಲರ್‌ ದಾನಿಗಳಿಂದ ಹರಿದುಬಂತು.ಅಕಾಲಿಕವಾಗಿ ಮಗು ಜನಿಸಿದ್ದರೂ ಮಗು ಆರೋಗ್ಯದಿಂದಿದೆ ಎಂದು ಬೆನ್ಸನ್ ಬರೆದಿದ್ದರು. ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಪುಟ್ಟ ಮಗುವನ್ನು ಹಿಡಿದಿರುವ ಚಿತ್ರವನ್ನು ಬೆನ್ಸನ್ ಪೋಸ್ಟ್ ಮಾಡಿದ್ದರು.ಈ ಪೋಸ್ಟ್‌ಗೆ ನೀಡಿದ ಶೀರ್ಷಿಕೆ ಹೀಗಿತ್ತು, ವಿಪುಲವಾಗಿ ದುಃಖವಾಗಿದೆ, ಆದರೆ ನಂಬಲಾಗದಷ್ಟು ಹೆಮ್ಮೆಯೆನಿಸಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ