ಭಾರತದೊಂದಿಗೆ ಶಾಂತಿ ಬಯಸುತ್ತೇವೆ: ಜರ್ದಾರಿ

ಶನಿವಾರ, 3 ಜನವರಿ 2009 (20:41 IST)
ನೆರೆಯ ಭಾರತದೊಂದಿಗೆ ಯುದ್ಧ ತಮಗೆ ಬೇಕಿಲ್ಲ ಎಂದು ಪುನರುಚ್ಚರಿಸಿರುವ ಪಾಕ್ ಅಧ್ಯಕ್ಷ ಅಸಿಫ್ ಅಲಿ ಜರ್ಜಾರಿ, ಪಾಕಿಸ್ತಾನ ಮತ್ತು ಭಾರತ ಎಲ್ಲಾ ಸಮಸ್ಯೆಗಳನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ.

ಮುಂಬೈ ದಾಳಿಯ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕ್ ನಡುವೆ ವೈಮನಸ್ಸು ಹೆಚ್ಚಿ, ಸಮರ ಸಾಧ್ಯತೆಯ ಹಿನ್ನೆಲೆಯಲ್ಲಿ ಚೀನಾ ತನ್ನ ವಿದೇಶಾಂಗ ಸಹಾಯಕ ಸಚಿವ ಹೆ ಯಾಫೈ ಅವರನ್ನು ಪಾಕಿಸ್ತಾನಕ್ಕೆ ಮಾತುಕತೆಗೆ ಕಳುಹಿಸಿದ ಸಂದರ್ಭದಲ್ಲಿ ಜರ್ದಾರಿ ತಮ್ಮ ಅಭಿಪ್ರಾಯವನ್ನು ತಿಳಿಸಿರುವುದಾಗಿ ಹೇಳಿದೆ.

ಭಾರತದೊಂದಿಗೆ ಯಾವುದೇ ವೈಮನಸ್ಸು ಇಲ್ಲ, ನಮಗೆ ಯುದ್ಧವೂ ಬೇಕಾಗಿಲ್ಲ ಎಂದಿರುವ ಜರ್ದಾರಿ, ಭಾರತದೊಂದಿಗೆ ಸ್ನೇಹಶೀಲವಾಗಿ ಮುಂದುವರಿಯುವುದಾಗಿ ಭರವಸೆ ನೀಡಿದ್ದಾರೆ.

ಅಲ್ಲದೇ ಸಮರೋತ್ಸವಕ್ಕೆ ಮುಂದಾಗಬಾರದು ಎಂದು ತಾಕೀತು ಮಾಡಿರುವ ಚೀನಾದ ಅಭಿಪ್ರಾಯಕ್ಕೆ ತಾನು ಬದ್ಧ ಎಂದು ಪಾಕ್ ಒಪ್ಪಿಗೆ ಸೂಚಿಸಿದೆ. ಆ ನಿಟ್ಟಿನಲ್ಲಿ ಭಾರತದೊಂದಿಗಿನ ಎಲ್ಲಾ ತಗಾದೆಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವುದಾಗಿ ಪಾಕ್ ಅಭಿಪ್ರಾಯ ವ್ಯಕ್ತಪಡಿಸಿದೆ.

ವೆಬ್ದುನಿಯಾವನ್ನು ಓದಿ