ಭಾರತದ ಗಡಿಯತ್ತ ಮತ್ತೆ ಪಾಕ್ ಸೇನೆ

ಶನಿವಾರ, 3 ಜನವರಿ 2009 (20:23 IST)
ಭಾರತದೊಂದಿಗೆ ಸಮರ ಇಲ್ಲ ಎಂದು ತಿಪ್ಪೆ ಸಾರಿರುವ ಪಾಕಿಸ್ತಾನ, ಇದೀಗ ಉಗ್ರಗಾಮಿ ಸಂಘಟನೆ ತಾಲಿಬಾನ್‌ನನ್ನು ನಿಗ್ರಹಿಸುವ ಚಟುವಟಿಕೆಗಳಲ್ಲಿ ನಿರತವಾಗಿರುವ ಸೇನಾ ಸಿಬ್ಬಂದಿಯನ್ನು ಪಾಕ್ ಸೇನೆ ಅಲ್ಲಿಂದ ಹಿಂದಕ್ಕೆ ಕರೆಯಿಸಿಕೊಂಡು ಭಾರತದ ಗಡಿಪ್ರದೇಶದಲ್ಲಿ ನಿಯೋಜಿಸತೊಡಗಿದೆ.

ಮುಂಬೈ ಮೇಲೆ ನಡೆದ ಭಯೋತ್ಪಾದಕರ ದಾಳಿಯ ಹಿನ್ನೆಲೆಯಲ್ಲಿ ನೇರ ಕ್ರಮಕ್ಕೆ ಮುಂದಾಗುವುದಾಗಿ ಭಾರತ ಎಚ್ಚರಿಕೆ ನೀಡಿದಾಗ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದಕರ ವಿರುದ್ಧ ಕ್ರಮ ಜರುಗಿಸಲು ಹೆಚ್ಚಾದ ಒತ್ತಡದ ಹಿನ್ನೆಲೆಯಲ್ಲಿ, ಪಾಕ್ ಯುದ್ದ ಸನ್ನದ್ದ ಎಂದು ಹೇಳುತ್ತಿದ್ದ ಪಾಕಿಸ್ತಾನದ ನಾಯಕರು ಭಾರತದೊಂದಿಗೆ ಯುದ್ದ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಶುಕ್ರವಾರದಿಂದಲೇ ಈ ಬುಡಕಟ್ಟು ಪ್ರದೇಶಗಳಲ್ಲಿ ನಿಯೋಜಿತರಾಗಿದ್ದ ಸೇನಾ ಸಿಬ್ಬಂದಿಯನ್ನು ತಮ್ಮ ಭಾರೀ ಶಸ್ತ್ರಾಸ್ತ್ರದೊಂದಿಗೆ ಹಿಂದಕ್ಕೆ ಕರೆಯಿಸಿಕೊಂಡು ಭಾರತದ ಗಡಿಯತ್ತ ಕಳುಹಿಸಲಾಗುತ್ತಿದೆ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ