ಭಾರತದ ಗಡಿಯಿಂದ ಪಾಕ್‌ಪಡೆಗಳ ಸ್ಥಳಾಂತರವಿಲ್ಲ

ಮಂಗಳವಾರ, 30 ಜೂನ್ 2009 (18:11 IST)
ಭಾರತ ಪಾಕಿಸ್ತಾನಕ್ಕೆ ಇನ್ನು ಮುಂದೆ ಬೆದರಿಕೆಯಲ್ಲ ಎಂಬ ಹೇಳಿಕೆಯನ್ನು ತಿರುಚಲಾಗಿದೆಯೆಂದು ಮಾಹಿತಿ ಖಾತೆ ಸಚಿವ ಕಮಾರ್ ಜಮಾನ್ ಕೈರಾ ತಿಳಿಸಿದ್ದಾರೆ. ಐಎಸ್‌ಪಿಆರ್ ವಕ್ತಾರ ಮೇಜರ್ ಜನರಲ್ ಅಥಾರ್ ಅಬ್ಬಾಸ್ ಜತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಕೈರಾ ಪಾಕಿಸ್ತಾನದ ಅಧ್ಯಕ್ಷ ಜರ್ದಾರಿ ಹೇಳಿಕೆಯನ್ನು ತಿರುಚಲಾಗಿದ್ದು, ತಕ್ಷಣಕ್ಕೆ ಯುದ್ಧದ ಬೆದರಿಕೆಯಿಲ್ಲವೆಂದು ಅವರ ಮಾತಿನ ಅರ್ಥವೆಂದು ನುಡಿದಿದ್ದಾರೆ.

ಪಾಕಿಸ್ತಾನದೊಳಕ್ಕೆ ಭಯೋತ್ಪಾದನೆ ಚಟುವಟಿಕೆಯಲ್ಲಿ ಭಾರತದ ಪಾತ್ರ ಮತ್ತು ಬುಡಕಟ್ಟು ಪ್ರದೇಶದಲ್ಲಿ ಉಗ್ರರಿಗೆ ಭಾರತ ಶಸ್ತ್ರಾಸ್ತ್ರ ಪೂರೈಸುತ್ತಿದೆಯೆಂಬ ಆರೋಪ ಕುರಿತು ಪ್ರಶ್ನಿಸಿದಾಗ, ಅದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಾಕ್ಷ್ಯ ಇಲ್ಲದಿರುವುದರಿಂದ ತಾವು ಪ್ರತಿಕ್ರಿಯಿಸುವುದಿಲ್ಲವೆಂದು ಹೇಳಿದ್ದಾರೆ.ಗಟ್ಟಿಯಾದ ಸಾಕ್ಷ್ಯಾಧಾರವಿದ್ದರೆ ನಾವು ವಿಷಯ ಪ್ರಸ್ತಾಪಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.

ಸರ್ಕಾರ ಜವಾಬ್ದಾರಿಯಿಂದ ವರ್ತಿಸುತ್ತಿದೆಯೆಂದು ಅವರು ಹೇಳಿದ್ದಾರೆ. ಭಾರತದ ಪೂರ್ವಗಡಿಯಿಂದ ಆಫ್ಘಾನಿಸ್ತಾನದ ಪಶ್ಚಿಮ ಗಡಿಗೆ ಪಡೆಗಳನ್ನು ಸ್ಥಳಾಂತರಿಸುವ ಸಾಧ್ಯತೆಯನ್ನು ಕೈರಾ ತಳ್ಳಿಹಾಕಿದ್ದಾರೆ. ಸಾಂಪ್ರದಾಯಿಕ ಬೆದರಿಕೆಗೆ ಪಾಕಿಸ್ತಾನ ಉಪೇಕ್ಷೆ ಮನೋಭಾವ ತಾಳುವಂತಿಲ್ಲವೆಂದು ಅವರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ