ಭಾಷಣ ನಿಲ್ಲಿಸಿ "ಗರ್ಭಿಣಿ ಸ್ತ್ರೀ"ಗೆ ಸಹಾಯ ಮಾಡಿದ ಒಬಾಮ.

ಮಂಗಳವಾರ, 22 ಅಕ್ಟೋಬರ್ 2013 (14:26 IST)
PTI
PTI
ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಮಾನವೀತೆ ಮೆರೆದಿದ್ದಾರೆ. ತಾವು ಭಾಷಣ ಮಾಡುತ್ತಿದ್ದಾಗ ಗರ್ಭಿಣಿ ಸ್ತ್ರೀಯೋರ್ವಳು ನಿಂತಿದ್ದನ್ನು ಕಂಡು ತಮ್ಮ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿ, ಗರ್ಭಿಣಿ ಸ್ತ್ರೀಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಿದರು. ಗರ್ಭಿಣಿ ಸ್ತ್ರೀಯನ್ನು ಅವರೇ ಕೈ ಹಿಡಿದ ಕುಳ್ಳಿರಿಸಿ ನಂತರ ಬಂದು ತಮ್ಮ ಭಾಷಣವನ್ನು ಮುಂದುವರಿಸಿದ್ರು.

ಡಯಾಬಿಟಿಕ್ ರೋಗಿಯಾಗಿರುವ ಕಾರ್ಮೆಲ್ ಅಲ್ಲಿಸನ್ ಎಂಬ ಮಹಿಳೆಯು ಗರ್ಭಿಣಿಯಾಗಿದ್ದಳು. ಆದಾಗ್ಯೂ ಒಬಾಮಾ ಭಾಷಣವನ್ನು ಕೇಳುವ ಸಲುವಾಗಿ ಬಂದಿದ್ದರು. ಸುಮಾರು 25 ನಿಮಿಷಗಳ ಒಬಾಮಾ ಭಾಷಣವನ್ನು ಕೇಳಿಸಿಕೊಂಡ ಮಹಿಳೆಯು ಇದ್ದಕ್ಕಿದ್ದಂತೆ ಸುಸ್ತಾದಂತೆ ಕಂಡಿತು. ಇನ್ನೇನು ಕುಸಿದು ಬೀಳುವ ಹಂತದಲ್ಲಿದ್ದ ಆಕೆಯನ್ನು ಸ್ವತಃ ಬರಾಕ್ ಒಬಾಮಾ ಅವರೇ ತಮ್ಮ ಭಾಷಣವನ್ನು ಅರ್ಧದಲ್ಲಿಯೇ ನಿಲ್ಲಿಸಿ, ಆ ಮಹಿಳೆಯ ಕೈ ಹಿಡಿದು. ಅವರನ್ನು ಕರೆದುಕೊಂಡು ಹೋಗಿ ಕುರ್ಚಿಯ ಮೇಲೆ ಕೂರಿಸಿದರು. "ನಿಮಗೆ ಏನೂ ಆಗಲಿಲ್ಲ ತಾನೆ? ಹುಷಾರಾಗಿ ಇದ್ದೀರಾ? ಎಂದು ಕುಷಲೋಪಹಾರಿ ವಿಚಾರಿಸಿದ್ರು.

ಜಗತ್ತೇ ಒಬಾಮಾ ಅವರ ಕಡೆ ನೋಡುತ್ತಿದ್ದರೆ, ಒಬಾಮಾ ಮಹಿಳೆಯೋರ್ವಳ ಕಡೆಗೆ ನೋಡುತ್ತಿದ್ದರು. ಭಾಷಣಕ್ಕಿಂತ ಸೇವೆ ದೊಡ್ಡದು ಎಂಬುದನ್ನು ಒಬಾಮಾ ಈ ವೇದಿಕೆಯಲ್ಲಿ ನಿರೂಪಿಸಿ ತೋರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ