ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ: ಗಾಯಕನಿಗೆ 35 ವರ್ಷ ಜೈಲು ಶಿಕ್ಷೆ

ಸೋಮವಾರ, 31 ಮಾರ್ಚ್ 2014 (19:48 IST)
ಲಂಡನ್: ಬ್ರಿಟಿಷ್ ರಾಕ್ ಬ್ಯಾಂಡ್‌ನ ಪ್ರಮುಖ ಗಾಯಕನೊಬ್ಬನಿಗೆ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ 35 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. ರಾಕ್ ತಂಡ ಲಾಸ್ಟ್ ಪ್ರಾಫೆಟ್ಸ್‌ನ ಪ್ರಮುಖ ಗಾಯ ಐಯಾನ್ ವಾಟ್ಕಿನ್ಸ್ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವ ಮೂಲಕ ಆನಂದ ಹೊಂದುತ್ತಿದ್ದ ಮತ್ತು ತನ್ನ ನಡವಳಿಕೆಗೆ ಸ್ವಲ್ಪವೂ ಪಶ್ಚಾತ್ತಾಪ ವ್ಯಕ್ತಪಡಿಸಿಲ್ಲ ಎಂದು ಕೋರ್ಟ್ ನ್ಯಾಯಾಧೀಶರು ಹೇಳಿದರು. ರಾಕ್ ಸ್ಟಾರ್ ಅಮೆರಿಕ ಮತ್ತು ಜರ್ಮನಿಗೆ ಕೂಡ ಪ್ರವಾಸ ಮಾಡಿದ್ದು ಅಲ್ಲಿನ ಮಕ್ಕಳ ಮೇಲೆ ಕೂಡ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

36 ವರ್ಷ ವಯಸ್ಸಿನ ವಾಟ್ಕಿನ್ಸ್ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ 13 ಪ್ರಕರಣಗಳಲ್ಲಿ ತಪ್ಪೊಪ್ಪಿಕೊಂಡಿದ್ದಾನೆ.ಗಾಯಕ ಸಂಪೂರ್ಣ ಪಶ್ಚಾತ್ತಾಪದ ಕೊರತೆಯನ್ನು ಪ್ರದರ್ಶಿಸಿದ್ದು,ಯುವತಿಯರಿಗೆ ಮತ್ತು ಮಕ್ಕಳಿಗೆ ಅಪಾಯಕಾರಿಯಾಗಿದ್ದಾನೆ ಎಂದು ನ್ಯಾಯಾಧೀಶರು ಅಭಿಪ್ರಾಯವ್ಯಕ್ತಪಡಿಸಿದರು.ನ್ಯಾಯಮೂರ್ತಿ ಗಾಯಕನಿಗೆ ಕೋರ್ಟ್‌ನಲ್ಲಿ ಕೆಂಡಕಾರಿದರು. ಇದಕ್ಕಿಂತ ಕೆಟ್ಟದ್ದು ಊಹಿಸುವುದು ಕಷ್ಟ. ನೀನೊಬ್ಬ ಲೈಂಗಿಕ ಬೇಟೆಗಾರ. ಅಪಾಯಕಾರಿ, ಸಾರ್ವಜನಿಕರು ವಿಶೇಷವಾಗಿ ಯುವತಿಯರು ಮತ್ತು ಮಕ್ಕಳಿಗೆ ನಿನ್ನಿಂದ ರಕ್ಷಣೆ ಬೇಕಾಗಿದೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ