ಮಲೇಶಿಯದಲ್ಲಿ ಸಿಕ್ಕಿಬಿದ್ದ 62 ಭಾರತೀಯರು

ನೇಮಕಾತಿ ಏಜಂಟರು ಕಳೆದ ವಾರ ಉದ್ಯೋಗದ ಆಮಿಷ ಒಡ್ಡಿ ಇಲ್ಲಿಗೆ ಕರೆತಂದ 62 ಭಾರತೀಯ ಪೌರರು ಮಲೇಶಿಯ ರಾಜಧಾನಿಯಲ್ಲೇ ಸಿಕ್ಕಿಬಿದ್ದ ಘಟನೆ ನಡೆದಿದೆ. ಜೋಹರ್ ಮಸೈನಲ್ಲಿ ಅವರಿಗೆ ಉದ್ಯೋಗಗಳನ್ನು ನೀಡುವುದಾಗಿ ಭರವಸೆ ನೀಡಲಾಗಿತ್ತೆಂದು ತಮಿಳು ದಿನಪತ್ರಿಕೆ ಮಕ್ಕಳ ಒಸೈ ತಿಳಿಸಿದೆ.

ಆದರೆ ಈಗ ಉದ್ಯೋಗವೂ ಸಿಗದೇ, ಭಾರತಕ್ಕೆ ವಾಪಸಾಗಲು ಹಣವೂ ಇಲ್ಲದೇ ಅಲ್ಲೇ ಸಿಕ್ಕಿಬಿದ್ದಿದ್ದಾರೆಂದು ಹೇಳಲಾಗಿದೆ. ಕೌಲಾಲಂಪುರಕ್ಕೆ ಆಗಮಿಸಿದ 62 ಮಂದಿ ಭಾರತೀಯ ಪೌರರು ಕಳೆದ ಐದು ದಿನಗಳಿಂದ ಬಾಟು ಕೇವ್ಸ್ ಸಮುದಾಯ ಭವನದಲ್ಲಿ ತಂಗಿದ್ದಾರೆಂದು ತಿಳಿದುಬಂದಿದೆ.

ತಮ್ಮಲ್ಲಿ ಅನೇಕ ಜನರು ಆಭರಣಗಳನ್ನು ಒತ್ತೆಇಟ್ಟು ಮಲೇಶಿಯದ ಪ್ರಯಾಣಕ್ಕೆ ಸಾಲ ಪಡೆದಿದ್ದಾಗಿ ಚೆನ್ನೈನ ಸಿ.ಪ್ರಭು ಎಂಬವನು ಹೇಳಿದ್ದಾನೆ. ಅವರ ಉದ್ಯೋಗ ನೇಮಕಾತಿ ಏಜೆಂಟ್ ಲಾಭದಾಯಕ ಉದ್ಯೋಗಗಳನ್ನು ಒದಗಿಸುವ ಭರವಸೆ ನೀಡಿದ ಬಳಿಕ ಅವರು ಮಲೇಶಿಯಕ್ಕೆ ತೆರಳಲು ನಿರ್ಧರಿಸಿದ್ದರು.

ವೆಬ್ದುನಿಯಾವನ್ನು ಓದಿ