ಮಹಿಳಾ ಉಗ್ರಗಾಮಿಯನ್ನು ಬಿಡಿ; ಜರ್ಮನಿಗೆ ಕೈದಾ ಬೆದರಿಕೆ

ಶುಕ್ರವಾರ, 6 ಏಪ್ರಿಲ್ 2012 (13:50 IST)
PR
ಜೈಲಿಗೆ ತಳ್ಳಲ್ಪಟ್ಟಿರುವ ಮಹಿಳಾ ಉಗ್ರರನ್ನು ಕೂಡಲೇ ಬಿಡುಗಡೆಗೊಳಿಸದಿದ್ದರೆ ಜರ್ಮನಿಯ ಕೇಂದ್ರ ಸ್ಥಾನದ ಮೇಲೆ ದಾಳಿ ನಡೆಸಲಾಗುವುದೆಂದು ಅಲ್‌ ಖಾಯಿದಾ ಬಳಸುವ ಇಸ್ಲಾಮಿಕ್‌ ವೆಬ್‌ಸೈಟೊಂದು ಬೆದರಿಕೆಯೊಡ್ಡಿದೆ.

ಇದು ಜರ್ಮನಿಯ ಮುದುಕಿ (ಚಾನ್ಸೆಲರ್‌ ಆಯೆಂಜೆಲಾ)ಮರ್ಕೆಲ್‌ಗೆ ವಿಶೇಷ ಸಂದೇಶ.... ನೀವು ಫ್ರಾನ್ಸ್‌ನಲ್ಲಿ ನಡೆದ ಘಟನೆಯಿಂದ ಪಾಠ ಕಲಿಯಬೇಕು. ಇನ್ನೊಬ್ಬ ಮೊಹಮ್ಮದ್‌ ಮೆರಾಹ್‌ ಬರ್ಲಿನ್‌ನ ಕೇಂದ್ರ ಭಾಗದಲ್ಲಿ ದಾಳಿ ನಡೆಸುವ ಮುನ್ನ ಉಮ್‌ ಸೈಫ್ ಅಲ್‌ ಇಸ್ಲಾಮ್‌ ಅಲ್‌ ಅನ್ಸಾರಿಯಾಳನ್ನು ಬಿಡುಗಡೆಗೊಳಿಸಿ ಎಂದು ಈ ಸಂದೇಶದಲ್ಲಿ ಹೇಳಲಾಗಿದೆ. ಫ್ರಾನ್ಸ್‌ನ ತೌಲೋಸ್‌ನಲ್ಲಿ ಮಾರ್ಚ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 7 ಮಂದಿ ಬಲಿಯಾಗಿದ್ದರು.

ಅಲ್‌ ಖಾಯಿದಾದ ಉತ್ತರ ಅಮೆರಿಕ ಶಾಖೆಯಾಗಿರುವ ಇಸ್ಲಾಮಿಕ್‌ ಮಘೆಬ್‌ ಜನವರಿಯಲ್ಲಿ ನೈಜೀರಿಯಾದಲ್ಲಿ ಜರ್ಮನಿಯ ಎಂಜಿಯರ್‌ ಒಬ್ಬರನ್ನು ಅಪಹರಿಸಿ ಒತ್ತೆಸೆರೆಯಲ್ಲಿರಿಸಿಕೊಂಡಿದ್ದು, ಜರ್ಮನಿಯಲ್ಲಿ ಸೆರೆಯಲ್ಲಿರುವ ಮಹಿಳಾ ಉಗ್ರವಾದಿಯ ಬಿಡುಗಡೆಗೆ ಪ್ರತಿಯಾಗಿ ಅವರನ್ನು ಬಂಧಮುಕ್ತಗೊಳಿಸಲು ಬಯಸಿದೆ.

ವೆಬ್ದುನಿಯಾವನ್ನು ಓದಿ