ಮಾಜಿ ಫುಟ್ಬಾಲ್ ಆಟಗಾರರಾದ ಗ್ಯಾರಿ, ಫಿಲ್ ನೆವಿಲ್ಲೆ ತಂದೆಯ ಲೈಂಗಿಕ ದೌರ್ಜನ್ಯ

ಮಂಗಳವಾರ, 17 ಡಿಸೆಂಬರ್ 2013 (16:58 IST)
PR
PR
ಲಂಡನ್: ಇಂಗ್ಲೀಷ್ ಪ್ರೀಮಿಯರ್ ಲೀಗ್ ಮಾಜಿ ಫುಟ್ಬಾಲ್ ಆಟಗಾರರಾದ ಗ್ಯಾರಿ ಮತ್ತು ಫಿಲ್ ನೆವಿಲ್ಲೆ ಅವರ 63 ವರ್ಷ ವಯಸ್ಸಿನ ತಂದೆ ನೆವಿಲ್ಲೆ ನೆವಿಲ್ಲೆ ಮಹಿಳೆಯೊಬ್ಬರ ಮೇಲೆ ಕುಡಿದ ಮತ್ತಿನಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ವರದಿಯಾಗಿದೆ. ಚಳಿ ಮತ್ತು ಮಂಜಿನಿಂದ ಕೂಡಿದ ರಾತ್ರಿಯಲ್ಲಿ ಮಹಿಳೆ 63 ವರ್ಷ ವಯಸ್ಸಿನ ನೆವಿಲ್ಲೆ ಮನೆಗೆ ಡ್ರಾಪ್ ಕೊಡುವಾಗ ಈ ಘಟನೆ ಸಂಭವಿಸಿದೆ.ಗ್ರೇಟರ್ ಮ್ಯಾಂಚೆಸ್ಟರ್ ಬರಿಯಲ್ಲಿ ಈ ಘಟನೆ ನಡೆದಾಗ ನೆವಿಲ್ಲೆ ಮಿತಿಮೀರಿ ಮದ್ಯ ಸೇವನೆ ಮಾಡಿದ್ದರು ಎಂದು ಕೋರ್ಟ್‌ಗೆ ಪ್ರಾಸಿಕ್ಯೂಟರ್ ತಿಳಿಸಿದರು.

ತೀವ್ರ ಚಳಿ ಮತ್ತು ಮಂಜಿನಿಂದ ಕೂಡಿದ ರಾತ್ರಿ ಮಹಿಳೆ ಮನೆಯ ಬಳಿ ಅವನನ್ನು ಇಳಿಸಿದಾಗ ದಿಢೀರನೇ ಅವಳ ಮೈಮೇಲೆ ಬಿದ್ದು ಅವಳ ಬಾಯಿಯಲ್ಲಿ ನಾಲಗೆಯನ್ನು ತೂರಿಸಿದ. ಮಹಿಳೆ ನಿಲ್ಲಿಸುವಂತೆ ಹೇಳಿದರೂ ಅವನು ಸ್ತನವನ್ನು ಒತ್ತಿಹಿಡಿದು ಅವಳ ಒಳಉಡುಪಿನೊಳಕ್ಕೆ ಕೈತೂರಿಸಿದ ಎಂದು ಪ್ರಾಸಿಕ್ಯೂಟರ್ ಆರೋಪಿಸಿದ್ದಾರೆ.

PR
PR
ನಂತರ ಅವಳನ್ನು ಸೀಟಿಗೆ ಒತ್ತಿಹಿಡಿದು, ಚುಂಬನ ಕೊಡುವುದನ್ನು ನಿಲ್ಲಿಸದ ಆರೋಪಿ ಕೈಯಿಂದ ಸ್ತನವನ್ನು ಅದುಮಿದ. ಇದರಿಂದ ತೀವ್ರ ಗಾಬರಿಗೊಂಡ ಮಹಿಳೆಗೆ ಏನು ಮಾಡಬೇಕೆಂದು ತೋಚಲಿಲ್ಲ ಎಂದು ಪ್ರಾಸಿಕ್ಯೂಟರ್‌ ಕೋರ್ಟ್‌ಗೆ ತಿಳಿಸಿದರು.ನಂತರ ಅವಳ ಮೇಲೆ ಲೈಂಗಿಕ ದೌರ್ಜನ್ಯವನ್ನು ಒರಟು ರೀತಿಯಲ್ಲಿ ಎಸಗಿದ ಎಂದು ಕೋರ್ಟ್‌ಗೆ ಪ್ರಾಸಿಕ್ಯೂಟರ್ ತಿಳಿಸಿದರು. ಆರೋಪಿ ಹೊರಕ್ಕೆ ಬಂದ ಕೂಡಲೇ ಕಾರನ್ನು ವೇಗವಾಗಿ ಬಿಟ್ಟುಕೊಂಡು ಮಹಿಳೆ ಹೋದರು. ತೀವ್ರವಾಗಿ ಹೆದರಿದ್ದ ಮಹಿಳೆ ಅಂತಹ ಚಳಿಯಲ್ಲೂ ಬೆವೆತು ಹೋಗಿದ್ದರು ಎಂದು ಪ್ರಾಸಿಕ್ಯೂಟರ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ