ಮಾದಕವಸ್ತು ಪಟ್ಟಿಯಲ್ಲಿ ಭಾರತ, ಪಾಕ್

ಮಂಗಳವಾರ, 18 ಸೆಪ್ಟಂಬರ್ 2007 (11:05 IST)
ಮಾದಕ ವಸ್ತು ಉತ್ಪಾದನೆ ಮತ್ತು ಸಾಗಣೆಯ ಪ್ರಮುಖ 20 ರಾಷ್ಟ್ರಗಳಲ್ಲಿ ಭಾರತ ಮತ್ತು ಪಾಕಿಸ್ತಾನ ಕೂಡ ಸ್ಥಾನ ಪಡೆದಿವೆ. ಅಮೆರಿಕ ವಿದೇಶಾಂಗ ಇಲಾಖೆ ಸಂಗ್ರಹಿಸಿರುವ ವರದಿಯನ್ನು ಶ್ವೇತಭವನ ಸೋಮವಾರ ಬಿಡುಗಡೆ ಮಾಡಿದೆ.

ಪ್ರಮುಖ ಮಾದಕ ವಸ್ತು ಉತ್ಪಾದಕ ಅಥವಾ ಸಾಗಣೆ ರಾಷ್ಟ್ರವೆಂದರೆ ಆ ಪಿಡುಗನ್ನು ನಿಭಾಯಿಸಲು ಸರ್ಕಾರ ಪ್ರಯತ್ನಿಸುತ್ತಿಲ್ಲ ಎಂದು ಅರ್ಥವಲ್ಲ ಎಂದು ಅದು ಸ್ಪಷ್ಟಪಡಿಸಿದೆ.ಕಳೆದ ಎರಡು ವರ್ಷಗಳಲ್ಲಿ ಕಾಣಿಸಿಕೊಂಡ ಪಟ್ಟಿಯಲ್ಲಿರುವ ರಾಷ್ಟ್ರಗಳ ಹೆಸರು ಈ ವರ್ಷವೂ ಬಂದಿವೆ.

ವರದಿಯಲ್ಲಿ ಆಫ್ಘಾನಿಸ್ತಾನ ಮತ್ತು ಕೊಲಂಬಿಯಾ ಅಕ್ರಮ ಅಫೀಮು ಮತ್ತು ಕೊಕೇನ್ ಅತ್ಯಧಿಕವಾಗಿ ಬೆಳೆಯುವ ರಾಷ್ಟ್ರಗಳು ಎಂದು ತಿಳಿಸಿವೆ.ಭಾರತದಲ್ಲಿ ಪರವಾನಗಿ ಪಡೆದ ರೈತರಿಗೆ ಸ್ಮಾರ್ಟ್ ಕಾರ್ಡ್ ನೀಡಿರುವ ಮೂಲಕ ಕಾನೂನುಬದ್ಧ ಅಫೀಮು ಉತ್ಪಾದನೆಯನ್ನು ನಿಯಂತ್ರಿಸುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಭಾರತವನ್ನು ಪಟ್ಟಿಯಲ್ಲಿ ಸೇರಿಸಿರುವ ಬಗ್ಗೆ ಕಾರಣಗಳನ್ನು ತಿಳಿಸಿದ ಅಂತಾರಾಷ್ಟ್ರೀಯ ಮಾದಕವಸ್ತು ತಡೆ ಇಲಾಖೆಯ ಉಪ ಸಹಾಯಕ ಕಾರ್ಯದರ್ಶಿ ಕ್ರಿಸ್ಟಿ ಕ್ಯಾಂಪ್‌ಬೆಲ್, ಭಾರತದ ಅಫೀಮಿನಲ್ಲಿ ಶೇ.30ರಷ್ಟು ಅಕ್ರಮ ಮಾರುಕಟ್ಟೆ ಪ್ರವೇಶಿಸುವ ಮೂಲಕ ಮಾರ್ಗ ಬದಲಿಸುತ್ತಿದೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ