ಮಾಸ್ಕೊ ಶಾಲೆಯಲ್ಲಿ ಬಂಧೂಕುದಾರಿ ಇಬ್ಬರನ್ನು ಗುಂಡಿಕ್ಕಿ ಕೊಂದ

ಸೋಮವಾರ, 3 ಫೆಬ್ರವರಿ 2014 (15:19 IST)
PR
PR
ಶಸ್ತ್ರಸಜ್ಜಿತ ವ್ಯಕ್ತಿಯೊಬ್ಬ ಇಬ್ಬರು ಪೊಲೀಸರಿಗೆ ಮತ್ತು ಶಿಕ್ಷಕರೊಬ್ಬರಿಗೆ ಗುಂಡಿಕ್ಕಿದ್ದರಿಂದ ಒಬ್ಬ ಪೊಲೀಸ್ ಮತ್ತು ಒಬ್ಬರು ಶಿಕ್ಷಕರು ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ನಂತರ ಶಾಲೆಯೊಳಗೆ ನುಗ್ಗಿದ ಅವನು ಶಾಲೆಯ ಅನೇಕ ವಿದ್ಯಾರ್ಥಿಗಳನ್ನು ಒತ್ತೆಯಾಳಾಗಿ ಇರಿಸಿಕೊಂಡ. ಈ ಘಟನೆ ಈಶಾನ್ಯ ಮಾಸ್ಕೋದ ಆಟ್ರಾಡ್ನೋ ಪ್ರದೇಶದಲ್ಲಿ ಸಂಭವಿಸಿದೆ.

ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದ ಯುವಕ ಶಾಟ್‌ಗನ್ ಹಿಡಿದು ಶಾಲೆಯೊಳಗೆ ಪ್ರವೇಶಿಸಿ ಶಾಲೆಯ ಪ್ರವೇಶ ದ್ವಾರದಲ್ಲಿ ಕಾವಲು ಕಾಯುತ್ತಿದ್ದ ಪೊಲೀಸನಿಗೆ ಗುಂಡಿಕ್ಕಿದ ಮತ್ತು ಜೀವಶಾಸ್ತ್ರ ತರಗತಿಯ ಅನೇಕ ಮಕ್ಕಳನ್ನು ಒತ್ತೆಯಾಳಾಗಿ ಇರಿಸಿಕೊಂಡ.ಸುಮಾರು 15 ವರ್ಷ ವಯಸ್ಸಿನ ಕನಿಷ್ಠ 20 ಮಕ್ಕಳು ಮತ್ತು ಒಬ್ಬ ಶಾಲಾ ಶಿಕ್ಷಕರನ್ನು ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿತ್ತು.

ವೆಬ್ದುನಿಯಾವನ್ನು ಓದಿ