ಯಾವುದೇ ಗಳಿಗೆಯಲ್ಲಾದ್ರೂ ಯುದ್ದ ಸಂಭವಿಸಬಹುದು: ಕಿಮ್ ಎಚ್ಚರಿಕೆ

ಬುಧವಾರ, 25 ಡಿಸೆಂಬರ್ 2013 (15:39 IST)
PR
PR
ಉತ್ತರ ಕೊರಿಯಾ ಮುಖಂಡ ಕಿಮ್ ಜಾಂಗ್-ಉನ್ ದೇಶದ ಮಿಲಿಟರಿಗೆ ಸನ್ನದ್ದ ಸ್ಥಿತಿಯಲ್ಲಿರುವಂತೆ ಸೂಚಿಸಿದ್ದಾರೆ. ಯುದ್ಧವು ಯಾವುದೇ ಸಂದರ್ಭದಲ್ಲಿ ಯಾವುದೇ ಮುನ್ಸೂಚನೆ ನೀಡದೇ ಸಂಭವಿಸಬಹುದು ಎಂದು ಎಚ್ಚರಿಸಿದ್ದಾರೆ.ಕಿಮ್ ಅವರ ಚಿಕ್ಕಪ್ಪನನ್ನು ಗಲ್ಲಿಗೇರಿಸಿದ ಹಿನ್ನೆಲೆಯಲ್ಲಿ ಉದ್ವಿಗ್ನ ಸ್ಥಿತಿಯ ಮೂಡಿರುವ ಸಂದರ್ಭದಲ್ಲಿ ಕಿಮ್ ಕರೆ ಹೊರಬಿದ್ದಿದೆ.ಕ್ರಿಸ್‌ಮಸ್ ಸಂದರ್ಭದಲ್ಲಿ ಲಾರ್ಜ್ ಕಂಬೈನ್ಡ್ ಯೂನಿಟ್ ದಳಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಪಡೆಗಳನ್ನು ಸಿದ್ಧವಾಗಿಟ್ಟಿರುವಂತೆ ಕರೆ ನೀಡಿದರು.

ಜಾಂಗ್ ಸಾಂಗ್ ಅವರ ಮರಣದಂಡನೆ ಬಳಿಕ ಪ್ರಭುತ್ವದ ಸ್ಥಿರತೆ ಬಗ್ಗೆ ಆತಂಕದ ಸ್ಥಿತಿ ಹೆಚ್ಚಿದೆ. ಸೋಲ್ ಮತ್ತು ವಾಷಿಂಗ್ಟನ್ ಸಂಭವನೀಯ ಪ್ರಚೋದನಾ ಕಾರಿ ಕ್ರಮಗಳ ಬಗ್ಗೆ ಉತ್ತರ ಕೊರಿಯಾಕ್ಕೆ ಎಚ್ಚರಿಕೆ ನೀಡಿವೆ.ಉತ್ತರ ಕೊರಿಯಾದ ಯಾವುದೇ ಪ್ರಚೋದನೆಗಳಿಗೆ ನಾವು ನಿರ್ದಯವಾಗಿ ಪ್ರತಿಕ್ರಿಯಿಸಬೇಕು ಎಂದು ದಕ್ಷಿಣ ಕೊರಿಯಾದ ಅಧ್ಯಕ್ಷೆ ಪಾರ್ಕ್ ಗ್ಯುನ್ ಹೈ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ