ಯುವತಿಯ ಪ್ರಾಣಕ್ಕೆ ಕುತ್ತು ತಂದ ಕುಡಿತದ ಅಮಲು

ಬುಧವಾರ, 2 ಅಕ್ಟೋಬರ್ 2013 (18:12 IST)
PR
PR
ಬೆಂಗಳೂರು: ಕುಡಿತದ ಅಮಲನಲ್ಲಿದ್ದ ಯುವತಿ ಅಪಾರ್ಟ್‌ಮೆಂಟ್‌ನಿಂದ ಕೆಳಕ್ಕೆ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ಸಾಫ್ಟ್‌ವೇರ್ ಎಂಜಿನಿಯರ್ ಕವಿತಾ ಈ ದುರಂತ ಸಾವನ್ನು ಅಪ್ಪಿದ್ದಾರೆ.. ಸಹಕಾರನಗರದ ಆಲ್ಫಿನ್ ಪಿರಮಿಡ್‌ ಅಪಾರ್ಟ್‌ಮೆಂಟ್‌ನಿಂದ ಆಕಸ್ಮಿಕವಾಗಿ ಬಿದ್ದು ಕವಿತಾ ಮೃತರಾದರು. ಅಮೆರಿಕದಲ್ಲಿ ಕವಿತಾ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.

31 ವರ್ಷ ವಯಸ್ಸಿನ ಕವಿತಾ ಇನ್ನೂ ಏಳು ಮಂದಿ ಸ್ನೇಹಿತೆಯರ ಜತೆ ಪಾರ್ಟಿಯೊಂದಕ್ಕೆ ಬಂದಿದ್ದಳು. ಮಧ್ಯರಾತ್ರಿ 2.30ರವರೆಗೆ ಗುಂಡಿನ ಪಾರ್ಟಿ ನಡೆಯಿತು. ತೀವ್ರ ಕುಡಿದ ಮತ್ತಿನಲ್ಲಿದ್ದ ಕವಿತಾ ನಂತರ ಸ್ನೇಹಿತನ ಮನೆಗೆ ಬಂದು ಬಾಲ್ಕನಿಯಲ್ಲಿ ನಿಂತಿದ್ದಾಗ ಆಕಸ್ಮಿಕವಾಗಿ ಆಯತಪ್ಪಿ ಮಹಡಿಯ ಮೇಲಿನಿಂದ ಕೆಳಕ್ಕೆ ಬಿದ್ದರೆಂದು ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ