ರಮ್ಜಾನ್ ಸಂದರ್ಭದಲ್ಲಿ 3ಲಕ್ಷ ಮಕ್ಕಳಿಗೆ ಬಟ್ಟೆ ವಿತರಿಸಿದ ಶೇಖ್

ಬುಧವಾರ, 31 ಜುಲೈ 2013 (17:16 IST)
PR
PR
ದುಬೈ: ದುಬೈನ ಅರಸ ಭಾರತ ಸೇರಿದಂತೆ 25 ರಾಷ್ಟ್ರಗಳ 30 ಲಕ್ಷ ಆರ್ಥಿಕ ದುರ್ಬಲ ಮಕ್ಕಳಿಗೆ ಬಟ್ಟೆಗಳನ್ನು ವಿತರಿಸಿದ್ದಾರೆ. ಮುಸ್ಲಿಂ ಪವಿತ್ರ ದಿನ ರಮ್ಜಾನ್‌ ಸಂದರ್ಭದಲ್ಲಿ ಆರಂಭಿಸಿದ ಮಾನವೀಯತೆ ನೆರವಿನ ಅಭಿಯಾನದ ಅನ್ವಯ ಈ ವಿತರಣೆ ಮಾಡಿದ್ದಾರೆ. ಶೇಕ್ ಮಹಮ್ಮದ್ ಬಿನ್ ರಷೀದ್ ಅಲ್ ಮುಕ್ತೌಮ್ ಜುಲೈ 11ರಂದು ವಿಶ್ವಾದ್ಯಂತ ಒಂದು ದಶಲಕ್ಷ ನಿರ್ಗತಿಕ ಮಕ್ಕಳಿಗೆ ಉಡುಪನ್ನು ಒದಗಿಸುವ ಅಭಿಯಾನ ಆರಂಭಿಸಿದ್ದರು.

ಆದರೆ, ಇದರ ಫಲಾನುಭವಿಗಳು ಮೂರು ದಶಲಕ್ಷವನ್ನು ಮುಟ್ಟಿದ್ದು, ಯೋಜಿತ ಅಂಕಿಅಂಶಕ್ಕಿಂತ ಮೂರು ಪಟ್ಟು ಮೀರಿದೆ.ಉದಾರಿ ಯುಎಇ ಜನತೆಯನ್ನು ಈ ಅಭಿಯಾನದಲ್ಲಿ ತೊಡಗಿಸಿದ್ದರಿಂದ ಈದ್ ಸಂದರ್ಭದಲ್ಲಿ 30 ಲಕ್ಷ ಮಕ್ಕಳ ಮನಸ್ಸಿನಲ್ಲಿ ಸಂತಸ ತಂದಿದೆ.

ಇದರ ಜತೆಗೆ ಜಗತ್ತಿನಾದ್ಯಂತ ಲಕ್ಷಾಂತರ ಜನರಿಗೆ ಅನುಕೂಲವಾಗುವ ಉಪಕ್ರಮಗಳನ್ನು ಕೈಗೊಂಡಿದ್ದು, ಯುಎಇಯನ್ನು ಧರ್ಮಕಾರ್ಯದ ರಾಜಧಾನಿಯಾಗಿ ಸ್ಥಾಪಿಸಿದೆ ಎಂದು ಶೇಕ್ ಮಹಮ್ಮದ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ