ರಷ್ಯಾ ಜತೆ ಸೇನಾ ಮಾಹಿತಿ ವಿನಿಮಯ ಸ್ಥಗಿತ: ಬ್ರಿಟನ್

ಶನಿವಾರ, 26 ನವೆಂಬರ್ 2011 (16:26 IST)
ರಷ್ಯಾದೊಂದಿಗೆ ಸೇನಾ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುವುದನ್ನು ಸ್ಥಗಿತಗೊಳಿಸಲು ಬ್ರಿಟನ್‌ ನಿರ್ಧರಿಸಿದೆ. ಯೂರೋಪ್‌ನೊಂದಿಗೆ ಸೇನಾ ಒಪ್ಪಂದ (ಸಿಎಫ್‌ಸಿ)ವನ್ನು ಸ್ಥಗಿತಗೊಳಿಸಲು ರಷ್ಯಾ ನಿರ್ಧರಿಸಿದ ಹಿನ್ನೆಲೆಯಲ್ಲಿ ಬ್ರಿಟನ್‌ ಈ ಕ್ರಮ ಕೈಗೊಂಡಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಈ ಸೇನಾ ಒಪ್ಪಂದವು ಅಟ್ಲಾಂಟಿಕ್‌ ನಿಂದ ಉರ್ಲಸ್‌ವರೆಗೂ ಸೇನಾ ಪಡೆಯನ್ನು ನಿಯೋಜಿಸುತ್ತದೆ.

ಸಿಎಫ್‌ಸಿ ಒಪ್ಪಂದವನ್ನು ಸಮರ್ಪಕವಾಗಿ ನಿರ್ವಹಿಸಲು ರಷ್ಯಾ ವಿಫಲವಾಗಿತ್ತು ಎಂದು ಯೂರೋಪ್‌ ಸಚಿವ ಡೇವಿಡ್‌ ಲೀಡಿಂಗ್ಟನ್‌ ಅವರು ಬ್ರಿಟನ್‌ ಸಂಸತ್‌ನಲ್ಲಿ ತಿಳಿಸಿದ್ದಾರೆ.

ಸಿಎಫ್‌ಸಿ ಒಪ್ಪಂದಕ್ಕೆ ನ್ಯಾಟೋದ 16 ರಾಷ್ಟ್ರಗಳು 1990ರಲ್ಲೇ ಸಹಿ ಹಾಕಿದ್ದವು. ಈ ಒಪ್ಪಂದದ ಪ್ರಕಾರ ನ್ಯಾಟೋ ಸದಸ್ಯ ರಾಷ್ಟ್ರಗಳು ಸಿಎಫ್‌ಸಿ ಪಡೆಗೆ ಸೇನಾ ಟ್ಯಾಂಕ್‌ಗಳು, ಸೇನಾ ವಾಹನಗಳು, ಫಿರಂಗಿಗಳು, ಹೆಲಿಕಾಪ್ಟರ್‌ಗಳು ಹಾಗೂ ಯುದ್ಧವಿಮಾನಗಳನ್ನು ಸರಬರಾಜು ಮಾಡಬೇಕು.

ಸೋವಿಯತ್‌ ಒಕ್ಕೂಟದಿಂದ ಬೇರ್ಪಡೆಯಾದ ಪೂರ್ವ ಯೂರೋಪ್‌ನಲ್ಲಿರುವ ಉಪ ರಾಜ್ಯಗಳಲ್ಲಿ ಸ್ಥಿರತೆ ಕಾಪಾಡುವಲ್ಲಿ ಸಿಎಫ್‌ಸಿ ಪ್ರಮುಖ ಪಾತ್ರ ವಹಿಸಿತ್ತು.

ಸೇನೆ ಹಾಗೂ ರಾಜಕೀಯ ಪರಿಸ್ಥಿತಿಯ ಬದಲಾದ ಹಿನ್ನೆಲೆಯಲ್ಲಿ ಸೇನಾ ಒಪ್ಪಂದವು ಅಪ್ರಸ್ತುತವಾಗಿತ್ತು. ಆನಂತರ 1999ರಲ್ಲಿ ಈ ಒಪ್ಪಂದವನ್ನು ಪರಿಷ್ಕರಣೆ ಮಾಡಲಾಗಿತ್ತು. ಆದರೆ ರಷ್ಯಾದ ಸೇನಾ ಪಡೆಗಳು ಜಾರ್ಜಿಯಾ ಮತ್ತು ಮಾಲ್ಡೋವನ್ ವಲಯದಲ್ಲಿರುವುದಕ್ಕೆ ನ್ಯಾಟೋ ಸದಸ್ಯ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿದ್ದವು.

ರಷ್ಯಾವು 2007ರ ಡಿಸೆಂಬರ್‌ನಲ್ಲಿ ಸಿಎಫ್‌ಸಿ ವಿಸ್ತರಣಾ ಕಾರ್ಯದ ಮೇಲೆ ತಾತ್ಕಾಲಿಕ ನಿಷೇಧ ಹೇರಿತ್ತು. ಯೂರೋಪ್‌ನಲ್ಲಿ ಅಮೆರಿಕವು ಸೇನಾ ಕ್ಷಿಪಣಿ ಕಾರ್ಯಕ್ರಮ ಆಯೋಜಿಸಿರುವುದಕ್ಕೆ ನ್ಯಾಟೋ ಸದಸ್ಯ ರಾಷ್ಟ್ರಗಳೂ ಸಹ ವಿರೋಧಿಸಿದ್ದವು.

ವೆಬ್ದುನಿಯಾವನ್ನು ಓದಿ