ರಷ್ಯಾ; ಮದ್ಯಕ್ಕೆ ಮುಅಮ್ಮರ್ ಗಢಾಪಿ ಹೆಸರಿಡಲು ತಯಾರಿ!

ಬುಧವಾರ, 30 ನವೆಂಬರ್ 2011 (11:27 IST)
ಲಿಬಿಯಾವನ್ನು ಸುಮಾರು ನಲವತ್ತು ವರ್ಷಗಳ ಕಾಲ ಸರ್ವಾಧಿಕಾರಿಯಾಗಿ ಮೆರೆದ ಮುಅಮ್ಮರ್‌ ಗಡಾಫಿ ನ್ಯಾಟೋ ಪಡೆಗಳಿಂದ ಬಲಿಯಾಗಿ ತಿಂಗಳೇ ಕಳೆದಿದೆ. ಆದರೆ ರಷ್ಯಾದ ಮದ್ಯ ತಯಾರಿಕಾ ಕಂಪನಿಯೊಂದು ತನ್ನ ಉತ್ಪನ್ನಗಳಿಗೆ ಗಡಾಫಿಯ ಹೆಸರನ್ನಿಡುವ ಮೂಲಕ ಅವರ ಹೆಸರನ್ನು ಅಜರಾಮರವಾಗಿಸಲು ಹೊರಟಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಮದ್ಯ ತಯಾರಿಕಾ ಕಂಪನಿಯ ಮಾಲೀಕ ಅಲೆಕ್ಸಾಂಡ್ರಿ ಪೊಗ್ರೆಬಾ ಅವರು ತಮ್ಮ ಉತ್ಪನ್ನಗಳಿಗೆ ಮುಅಮ್ಮರ್‌ ಗಡಾಫಿಯ ಹೆಸರಿಡಲು ಅನುಮತಿ ನೀಡುವಂತೆ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಅಲೆಕ್ಸಾಂಡ್ರಿ ಪೊಗ್ರೆಬಾ ಮಾಲೀಕತ್ವದ ಕಂಪನಿಯು ರಷ್ಯಾದ ಅತಿ ದೊಡ್ಡ ಮದ್ಯ ತಯಾರಿಕಾ ಕಂಪನಿಯಾಗಿದೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಹೆಸರಿನಿಂದ ಪ್ರೇರಿತವಾ‌ದ ಕಂಪನಿ 2003ರಲ್ಲಿ ವೋಡ್ಕಾ ಪೇಯವನ್ನು ಪುಟಿನಿಕಾ ಎಂದು ಮರು ನಾಮಕರಣ ಮಾಡಿದ್ದು, ಈ ಉತ್ಪನ್ನಕ್ಕೆ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆಯಿದೆ.

ವೆಬ್ದುನಿಯಾವನ್ನು ಓದಿ