ರಾಮ ನಾಮ ಸೇರಿ 50 ಹೆಸರುಗಳ ಬಳಕೆಯನ್ನು ನಿಷೇಧಿಸಿದ ಸೌದಿ

ಶನಿವಾರ, 15 ಮಾರ್ಚ್ 2014 (13:15 IST)
PTI
ಸೌದಿ ಅರೇಬಿಯಾದಲ್ಲಿ ಇನ್ನೂ ಮೇಲೆ ಯಾರಿಗೂ ಕೂಡ ರಾಮ ಎಂಬ ಹೆಸರನ್ನು ಇಡುವ ಹಾಗಿಲ್ಲ. ಕಾರಣ ಏನೆಂದರೆ ಅಲ್ಲಿನ ಸರಕಾರ ಈ ಹೆಸರನ್ನು ಇಡಲು ಪ್ರತಿಬಂಧವನ್ನು ಹೇರಿದೆ. ರಾಮನಾಮದ ಜತೆಗೆ ಭಾರತದಲ್ಲಿ ಜನಪ್ರಿಯವಾಗಿರುವಂತಹ ಮಾಯಾ, ಮಲ್ಲಿಕಾ ಇಂತಹ ಅನೇಕ ಹೆಸರುಗಳನ್ನು ಬ್ಯಾನ್ ಮಾಡಲಾಗಿದೆ. ಇದೇ ರೀತಿಯಲ್ಲಿ ಪಶ್ಚಿಮ ದೇಶಗಳಲ್ಲಿ ಬಳಸಲ್ಪಡುವ ಅನೇಕ ಹೆಸರುಗಳ ಬಳಕೆಯನ್ನು ಸರಕಾರ ನಿಷೇಧಿಸಿದೆ.

ನಿಷೇಧಿಸಕ್ಕೆ ಕಾರಣ

ಈ ಹೆಸರುಗಳು ದೇಶದ ಸಂಸ್ಕೃತಿಗೆ ಅನುರೂಪವಾಗಿಲ್ಲ, ಹಾಗಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂಬ ಕಾರಣವನ್ನು ಸೌದಿ ಅರೇಬಿಯಾದ ಗೃಹ ಸಚಿವಾಲಯ ನೀಡಿದೆ. ಸೌದಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಭಾವನೆಗೆ ಧಕ್ಕೆ ತರುತ್ತದೆ ಎಂಬ ನೆಪ ನೀಡಿ ಒಟ್ಟು 50 ಹೆಸರುಗಳನ್ನು ನಿಷೇಧಿಸಲಾಗಿದೆ.

ನಿಷೇಧಿಸಿರುವ ನಾಮಗಳು ಧಾರ್ಮಿಕ ಸಂವೇದನೆಗಳಿಗೆ ಕುತ್ತು ತರುತ್ತವೆ. ರಾಜಪರಿವಾರದ ಮೂಲದಿಂದ ಬಂದಿವೆ ಅಲ್ಲದೇ ಇಸ್ಲಾಂ ಗೆ ವಿರುದ್ಧವಾಗಿವೆ. ಆದ್ದರಿಂದ ಅವುಗಳನ್ನು ಪ್ರತಿಬಂಧಿಸಲಾಗಿದೆ ಎಂದು ದೇಶ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ.

ತಮಾಷೆಯ ವಿಷಯ ಏನೆಂದರೆ ಬ್ಯಾನ್ ಮಾಡಿರುವ ಹೆಸರುಗಳಲ್ಲಿ ಬೆನ್ಯಾಮಿನ್ ಕೂಡ ಸೇರಿದೆ. ಇದು ಬೆಂಜಮಿನ್ ನ ಅರೆಬಿಕ್ ಅವತರಣಿಕೆಯಾಗಿದೆ. ಇಸ್ರೇಲ್ ನ ಪ್ರಧಾನಿ ಹೆಸರು ಬೆಂಜಮಿನ್ ಆಗಿರುವುದರಿಂದ ಈ ಹೆಸರನ್ನು ಕೂಡ ನಿಷೇಧಿಸಲಾಗಿದೆ.

ವೆಬ್ದುನಿಯಾವನ್ನು ಓದಿ