ರೂಮ್ ಮೇಟ್ ಗೆ ವಿಷ ಉಣಿಸಿದ್ದಕ್ಕಾಗಿ ಮರಣದಂಡನೆಗೊಳಗಾದ ಚೈನಾದ ವಿದ್ಯಾರ್ಥಿ

ಮಂಗಳವಾರ, 18 ಫೆಬ್ರವರಿ 2014 (14:55 IST)
PTI
ಕಳೆದ ವರ್ಷ ತನ್ನ ರೂಮ್ ಮೇಟ್ ಗೆ ವಿಷ ಉಣಿಸಿ ಹತ್ಯೆ ಮಾಡಿದ್ದಕ್ಕಾಗಿ 28 ವರ್ಷ ದ ವೈದ್ಯಕೀಯ ವಿದ್ಯಾರ್ಥಿಗೆ ಮಂಗಳವಾರ ಚೀನಾ ದಲ್ಲಿ ಮರಣದಂಡನೆ ವಿಧಿಸಲಾಯಿತು.

ಶಾಂಘೈ ನಂ 2 ಇಂಟರ್ ಮೀಡಿಯೇಟ್ ಪೀಪಲ್ಸ್ ಕೋರ್ಟ್, ಫುಡಾನ್ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿ ಲಿನ್ ಸೆನ್ವೊ, ಉದ್ದೇಶಪೂರ್ವಕ ನರಹತ್ಯೆ ಮಾಡಿದ್ದಾನೆ ಎಂದು ಆರೋಪಿಸಿದೆ.

ಲಿನ್ ಮಾರ್ಚ್ 31 ರಂದು ತಮ್ಮ ವಿಶ್ವವಿದ್ಯಾಲಯದ ಪ್ರಯೋಗಶಾಲೆಯಿಂದ ಮಾರಕ ರಾಸಾಯನಿಕ ಸಂಯುಕ್ತ ನೈಟ್ರೋಸೋಡಿಮೆಥಾಲಮೀನ್ ನ್ನು ತಂದು ಕುಡಿವ ನೀರಿನ ವಿತರಕವನ್ನು ಕಲುಷಿತಗೊಳಿಸಿದ್ದ.

ಆತನ ರೂಮ್ ಮೇಟ್ ಹುವಾಂಗ್ ಯಾಂಗ್ ಏಪ್ರಿಲ್ 1 ರಂದು ಆ ಕಲುಷಿತ ವಿತರಕ ದಿಂದ ನೀರನ್ನು ಸೇವಿಸಿ ಅಸ್ವಸ್ಥನಾದ. ಅವನನ್ನು ಉಳಿಸಲು ವೈದ್ಯರು ಮಾಡಿದ ಸತತ ಪ್ರಯತ್ನಗಳ ಹೊರತಾಗಿಯೂ ಅಂಗವೈಫಲ್ಯದಿಂದ ಮರಣ ಹೊಂದಿದ್ದ ಎಂದು ಸರ್ಕಾರಿ ಸುದ್ದಿ ಸಂಸ್ಥೆ ಕ್ಸಿನ್ಹುಆ ವರದಿ ಮಾಡಿದೆ.

ಲಿನ್, ಕ್ಷುಲ್ಲಕ ಕಾರಣಗಳಿಗಾಗಿ ಸಹ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿ ಹುವಾಂಗ್ ವಿರುದ್ಧ ದ್ವೇಷ ಹೊಂದಿದ್ದ ಎಂದು ನ್ಯಾಯಾಲಯ ಹೇಳಿದೆ.

ವೆಬ್ದುನಿಯಾವನ್ನು ಓದಿ