ಲಂಡನ್‌: ಸರ್ಕಾರಿ ಸೌಲಭ್ಯಕ್ಕಾಗಿಯೇ ಹೆಚ್ಚಿನ ಮಕ್ಕಳು!

ಭಾನುವಾರ, 18 ಸೆಪ್ಟಂಬರ್ 2011 (09:30 IST)
ಏಷ್ಯಾದಿಂದ ವಲಸೆ ಬಂದು ಬ್ರಿಟನ್‌ನಲ್ಲಿ ವಾಸಿಸುತ್ತಿರುವವರು ಸರಕಾರದ ಸೌಲಭ್ಯಕ್ಕಾಗಿ ಹೆಚ್ಚು ಮಕ್ಕಳನ್ನು ಪಡೆಯುತ್ತಿದ್ದಾರೆ ಎಂದು ಪೀರ್ ಪದವಿ ಪಡೆದ ಬ್ರಟನ್ನಿನ ಮೊದ ಏಷ್ಯಾ ಮಹಿಳೆ ಬ್ಯಾರೋನೆಸ್ ಪ್ಲಾಥರ್‌ ಆಪಾದಿಸಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಏಷ್ಯಾದ ವಲಸಿಗರು ಸರಕಾರದ ಸೌಲಭ್ಯಕ್ಕಾಗಿ ಹೆಚ್ಚು ಮಕ್ಕಳನ್ನು ಪಡೆಯುತ್ತಿದ್ದರೂ ರಾಜಕಾರಣಿಗಳು ಮಾತ್ರ ಈ ವಿಷಯವನ್ನು ಪ್ರಸ್ತಾಪಿಸಲು ಹಿಂಜರಿಯುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.

ಏಷ್ಯಾದ ಅದರಲ್ಲೀ ಮುಖ್ಯವಾಗಿ ಪಾಕಿಸ್ತಾನ ಮತ್ತು ಬಾಂಗ್ಲಾ‌ದೇಶದ ಮೂಲದವರು ಸರಕಾರದ ಸೌಲಭ್ಯಕ್ಕಾಗಿಯೇ ಹೆಚ್ಚಿನ ಮಕ್ಕಳನ್ನು ಹಡೆಯುತ್ತಿದ್ದಾರೆ ಎಂದು ಬಾರೋನ್ಸ್‌ ಪ್ಲಾಥರ್‌ ದೂರಿದ್ದಾರೆ.

ಯಾರೊಬ್ಬರೂ ಇದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ ಅಲ್ಲದೇ ಈ ಕುರಿತು ಯಾರೊಬ್ಬರೂ ಮಾತನಾಡುತ್ತಿಲ್ಲ, ಈ ವಿಷಯದ ಬಗ್ಗೆ ಮಾತನಾಡಿದರೆ ರಾಜಕೀಯವಾಗಿ ತಪ್ಪಾಗುತ್ತದೆ ಎಂಬ ಭಾವನೆಯೇ ಇದಕ್ಕೆ ಕಾರಣ ಎಂದು ಆಪಾದಿಸಿದ್ದಾರೆ.

ಹಣ ಹಾಗೂ ಸೌಲಭ್ಯಕ್ಕಾಗಿ ಹೆಚ್ಚಿನ ಮಕ್ಕಳನ್ನು ಪಡೆಯುವುದನ್ನು ನಿಲ್ಲಿಸಲು ಇದು ಸೂಕ್ತ ಸಮಯವಾಗಿದೆ ಎಂದು ಪ್ಲಾಥರ್‌ ಅಭಿಪ್ರಾಯಪಟ್ಟಿದ್ದಾರೆ.

ಪ್ರತಿಯೊಬ್ಬರಿಗೂ ಮೊದಲ ಎರಡು ಮಕ್ಕಳು ಮಕ್ಕಳಿರಬೇಕು ಎಂಬುದು ನನ್ನ ಅನಿಸಿಕೆಯಾಗಿದೆ. ಮೂರು ಮತ್ತು ನಾಲ್ಕನೇ ಮಕ್ಕಳಿಗೆ ಸೌಲಭ್ಯ ಕಲ್ಪಿಸುವುದು ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಸಮಾಜ ಕಲ್ಯಾಣ ಸುಧಾರಣೆ ಕಾಯ್ದೆಯ ಕುರಿತು ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಬಾರೋನ್ಸ್‌ ಪ್ಲಾಥರ್‌ ಮಾತನಾಡಿದರು. ಈ ಕಾಯ್ದೆಯನ್ವಯ ಕುಟುಂಬಕ್ಕೆ 26 ಸಾವಿರ ಪೌಂಡ್‌ ನೀಡಲಾಗುತ್ತದೆ.

ಇಳಿ ವಯಸ್ಸಿನಲ್ಲಿ ಮಕ್ಕಳು ನೆರವಾಗುತ್ತಾರೆ ಎಂದು ಕೆಲವರು ಹೇಳುತ್ತಾರೆ ಆದರೆ ಇಂಗ್ಲೆಂಡ್‌ನಲ್ಲಿ ಇದು ಅನ್ವಯವಾಗುವುದಿಲ್ಲ. ವಯಸ್ಸಾದವರಿಗೆ ಪಿಂಚಣಿ ನೀಡುವುದರೊಂದಿಗೆ ಅವರ ಯೋಗಕ್ಷೇಮವನ್ನೂ ನೋಡಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ