ವಾಯುನೆಲೆ ಗಡುವು; ಅಮೆರಿಕದ ಮನವಿಗೆ ಪಾಕಿಸ್ತಾನ ನಕಾರ

ಮಂಗಳವಾರ, 29 ನವೆಂಬರ್ 2011 (19:06 IST)
ಪಾಕಿಸ್ತಾನದ ಶಂಸಿ ವಾಯುನೆಲೆಯನ್ನು ತೆರವುಗೊಳಿಸಲು ನೀಡಿದ್ದ ಅಂತಿಮ ಗಡುವನ್ನು ವಿಸ್ತರಿಸಲು ಅಮೆರಿಕ ಮಾಡಿದ್ದ ಮನವಿಯನ್ನು ಪಾಕಿಸ್ತಾನ ಅಧ್ಯಕ್ಷ ಆಸಿಫ್‌ ಅಲಿ ಜರ್ದಾರಿ ಅವರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಅಮೆರಿಕದ ಗುಪ್ತಚರ ಪಡೆ (ಸಿಐಎ )ಶಂಕಿತ ಉಗ್ರರ ವಿರುದ್ಧ ಡ್ರೋನ್‌ (ಮಾನವ ರಹಿತ ಯುದ್ಧ ವಿಮಾನ) ದಾಳಿ ನಡೆಲು ಬಳಸುತ್ತಿದ್ದ ಶಂಸಿ ವಾಯುನೆಲೆಯನ್ನು ತೆರವುಗೊಳಿಸಲು ಪಾಕಿಸ್ತಾನ 15 ದಿನಗಳ ಗಡುವು ನೀಡಿತ್ತು.

ಶಂಸಿ ವಾಯುನೆಲೆ ತೆರವು ಗೊಳಿಸಲು ಪಾಕಿಸ್ತಾನವು ಅಮೆರಿಕಕ್ಕೆ ಗಡುವು ನೀಡಿದ್ದ ಹಿನ್ನೆಲೆಯಲ್ಲಿ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನ ವಿದೇಶಾಂಗ ಸಚಿವ ಶೇಖ್‌ ಅಬ್ದುಲ್ಲಾ ಬಿನ್‌ ಜಾಯಿದ್‌ ನಾಹ್ಯಾನ್‌ ಅವರು ಜರ್ದಾರಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಬಲೂಚಿಸ್ತಾನದಲ್ಲಿರುವ ಶಂಸಿ ವಾಯುನೆಲೆಯನ್ನು 1990ರಿಂದಲೂ ಯುಎಇ ನಿರ್ವಹಿಸುತ್ತಿದೆ.

ಅನಿರೀಕ್ಷಿತವಾಗಿ ಇಸ್ಲಾಮಾಬಾದ್‌ಗೆ ಭೇಟಿ ನೀಡಿದ ಶೇಖ್‌ ಅಬ್ದುಲ್ಲಾ ಅವರು ಜರ್ದಾರಿ ಹಾಗೂ ಪಾಕ್‌ ಸೇನಾ ಮುಖ್ಯಸ್ಥ ಜನರಲ್‌ ಅಶ್ಪಾಕ್‌ ಕಯಾನಿ ಅವರನ್ನು ಭೇಟಿ ಮಾಡಿದರು.

ಪಾಕಿಸ್ತಾನ- ಅಫ್ಘಾನಿಸ್ತಾನ ಗಡಿ ಭಾಗದಲ್ಲಿದ್ದ ಪಾಕ್‌ ಸೇನಾ ಚೆಕ್‌ ಪೋಸ್ಟ್‌ ಮೇಲೆ ನ್ಯಾಟೊ ಪಡೆ ಹೆಲಿಕಾಪ್ಟರ್‌ಗಳು ಗುಂಡಿನ ದಾಳಿ ನಡೆಸಿದ್ದರಿಂದ ಪಾಕ್‌ ಸೇನೆಯ 25 ಮಂದಿ ಯೋಧರು ಮೃತಪಟ್ಟಿದ್ದರು. ಈ ವಿದ್ಯಮಾನದಿಂದ ತೀವ್ರವಾಗಿ ಕುಪಿತವಾಗಿದ್ದ ಪಾಕ್‌, ನ್ಯಾಟೋ ಮತ್ತು ಅಮೆರಿಕ ಪಡೆಗಳಿಗೆ ಎಲ್ಲ ರೀತಿಯ ಸರಬರಾಜನ್ನು ಸ್ಥಗಿತಗೊಳಿಸುವುದಾಗಿ ಹೇಳಿದ್ದಲ್ಲದೇ ಶಂಸಿ ವಾಯುನೆಲೆಯನ್ನು ತೆರವುಗೊಳಿಸುವಂತೆ ಅಮೆರಿಕಕ್ಕೆ ಸೂಚಿಸಿತ್ತು.

ಯುಎಇ ವಿದೇಶಾಂಗ ಸಚಿವ ಶೇಕ್‌ ಅಬ್ದುಲ್ಲಾ ಅವರ ಭೇಟಿಯ ಕುರಿತು ಪಾಕ್‌ ಅಧ್ಯಕ್ಷರ ಕಚೇರಿ ಹಾಗೂ ಸೇನೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಶಂಸಿ ವಾಯುನೆಲೆಯ ವಿಷಯ ಪ್ರಸ್ತಾಪಿಸಲಾಗಿಲ್ಲ. ಶಂಸಿ ವಾಯು ನೆಲೆಯನ್ನು ಪಾಕಿಸ್ತಾನವು 1992ರಲ್ಲಿ ಯುಎಇಗೆ ಗುತ್ತಿಗೆ ನೀಡಿತ್ತು. ಅಮೆರಿಕದ ಮೇಲೆ ಭಯೋತ್ಪಾದಕರು ನಡೆಸಿದ್ದ 9/11 ದಾಳಿಯ ನಂತರ ಶಂಸಿ ವಾಯುನೆಲೆಯನ್ನು ಬಳಸಲು ಯುಎಇ ಅವಕಾಶ ನೀಡಿತ್ತು.

ಶಂಸಿ ವಾಯು ನೆಲೆಯನ್ನು ತೆರವುಗೊಳಿಸಲು ನೀಡಿರುವ ಅಮೆರಿಕಕ್ಕೆ ಗಡುವನ್ನು ವಿಸ್ತರಿಸುವಂತೆ ಯುಎಇ ವಿದೇಶಾಂಗ ಸಚಿವ ಶೇಖ್‌ ಅಬ್ದುಲ್ಲಾ ಅವರು ಮಾಡಿರುವ ಮನವಿಯನ್ನು ಜರ್ದಾರಿ ಸ್ಪಷ್ಟವಾಗಿಒ ನಿರಾಕರಿಸಿದ್ದಾರೆ ಎಂದು ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ