ವಿದ್ಯುತ್ ಉಳಿಕೆಗೆ ಒಂದು ಗಂಟೆ ಮುಂಚಲಿಸಿದ ಬಾಂಗ್ಲಾ

ಭಾನುವಾರ, 21 ಜೂನ್ 2009 (12:53 IST)
ತೀವ್ರ ವಿದ್ಯುತ್ ಸಮಸ್ಯೆಯನ್ನು ಎದುರಿಸುತ್ತಿರುವ ಬಾಂಗ್ಲಾದೇಶ ಇನ್ನುಮುಂದೆ ತನ್ನ ದಿನಚರಿಯನ್ನು ಒಂದು ಗಂಟೆ ಮುಂಚಿತವಾಗಿ ಆರಂಭಿಸಲಿದೆ. ಹಗಲುಬೆಳಕಿನಲ್ಲೇ ಕೆಲಸ ಮಾಡಲು ಅನುಕೂಲವಾಗುವಂತೆ ಬಾಂಗ್ಲಾದೇಶದ ಗಡಿಯಾರಗಳನ್ನು ಶುಕ್ರವಾರದಿಂದಲೇ ಒಂದು ಗಂಟೆ ಮುಂದಿಡಲಾಗಿದೆ.

ಇದರಿಂದಾಗಿ ಇನ್ನು ಬಾಂಗ್ಲಾದೇಶಿಗರಿಗೆ 11 ಗಂಟೆಗೆ ಮಧ್ಯರಾತ್ರಿಯಾಗುತ್ತದೆ. ಸೂರ್ಯಮುಳುಗುವ ತನಕ ಕೆಲಸ ಮಾಡುತ್ತಿದ್ದ ಕಂಪೆನಿಗಳು, ಕಾರ್ಖಾನೆಗಳು ಸೂರ್ಯಾಸ್ತಕ್ಕಿಂತ ಮುಂಚಿತವಾಗಿ ಕೆಲಸ ಮುಕ್ತಾಯಗೊಳಿಸಲಿವೆ.

ಹೊಸ ವೇಳೆಯಿಂದಾಗಿ ಶನಿವಾರ ಅಮ್ಮಂದಿರು ಒಂದು ಗಂಟೆ ಮುಂಚಿತವಾಗಿ ಎದ್ದು ತಮ್ಮ ಕಂದಮ್ಮಗಳನ್ನು ಶಾಲೆಗೆ ತಯ್ಯಾರು ಮಾಡಿದರು. ಅಂತೆಯೇ, ಕಚೇರಿಗಳು, ಶೈಕ್ಷಣಿಕ ಸಂಸ್ಥೆಗಳು, ಆಸ್ಪತ್ರೆಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಹೊಸ ಸಮಯಕ್ಕನುಗುಣವಾಗಿ ಶನಿವಾರ ತೆರೆದವು.

ಇದೀಗ ಬಾಂಗ್ಲಾದೇಶದ ಅಧಿಕೃತ ಸ್ಟಾಂಡರ್ಡ್ ಟೈಮ್ ಜಿಎಂಟಿ+7(ಗ್ರೀನ್‌ವಿಚ್ ಮೀನ್‌ಟೈಮ್).

ವೆಬ್ದುನಿಯಾವನ್ನು ಓದಿ