ವಿಮಾನದಲ್ಲಿ ಹಾವು ಪ್ರತ್ಯಕ್ಷ : ಭಯಭೀತರಾದ ಪ್ರಯಾಣಿಕರು

ಸೋಮವಾರ, 23 ಸೆಪ್ಟಂಬರ್ 2013 (15:55 IST)
PTI
PTI
370 ಜನರನ್ನು ಹೊತ್ತೊಯ್ಯುತ್ತಿದ್ದ ಕ್ವಾಂಟಾಸ್‌ ಬೋಯಿಂಗ್‌ 747 ವಿಮಾನದಲ್ಲಿ ಹಾವೊಂದು ಕಾಣಿಸಿಕೊಂಡ ಪರಿಣಾಮವಾಗಿ ಸಿಡ್ನಿಯಲ್ಲಿ ಇದ್ದಕ್ಕಿಂದಂತೆ ವಿಮಾನವನ್ನು ಲ್ಯಾಂಡ್ ಮಾಡಲಾಯಿತು.

ರಾತ್ರಿ ವೇಳೆಯಾಗಿದ್ದರಿಂದ ಪ್ರಯಾಣಿಕರಿಗೆ ಸಮೀಪದ ಹೊಟೆಲ್‌ಗಳಲ್ಲಿ ತಂಗಲು ಅಧಿಕಾರಿಗಳು ವ್ಯವಸ್ಥೆ ಮಾಡಿದರು. ನಂತರ ಹಾವು ಕಾಣಿಸಿಕೊಂಡ ಬೋಯಿಂಗ್ ವಿಮಾನವನ್ನು ಹೊರತುಪಡಿಸಿ ಅಧಿಕಾರಿಗಳು ಬೆಳಗಿನ ಜಾವದಲ್ಲಿ ಮತ್ತೊಂದು ವಿಮಾನದ ವ್ಯವಸ್ಥೆ ಮಾಡಿದರು.

ಸುಮಾರು 4 ಅಡಿಗಳಷ್ಟು ಉದ್ದವಿರುವ ಹಾವು ಜನರು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಹೇಗೆ ನುಸುಳಿತು ಎಂಬುದು ಎಲ್ಲರಿಗೂ ಅಚ್ಚರಿಯಾಗಿದೆ. ಆದರೆ ಅಂತಹ ಹಾವು ಏಷ್ಯಾ ಖಂಡದ ವ್ಯಾಪ್ತಿಯಲ್ಲಿ ಹೆಚ್ಚಾಗಿ ಕಾಣಸುಗುತ್ತವೆ. ಆದ್ರೆ ಆಸ್ಟ್ರೇಲಿಯಾ ದೇಶದಲ್ಲಿ ಅಂತಹ ಹಾವು ಅಷ್ಟಾಗಿ ಕಂಡುಬರುವುದಿಲ್ಲ. ಹೀಗಾಗಿ ಆ ಹಾವು ಸಿಂಗಪೂರ್‌ನಿಂದ ವಿಮಾನದಲ್ಲಿ ಬಂದಿರಬಹುದು ಎಂದು ಹೇಳಲಾಗುತ್ತಿದೆ.

ಈ ಹಿಂದೆ ಕೂಡ ಏವಿಯೇಷನ್‌ ಹಜಾರ್ಡ್‌ ನಲ್ಲಿ ಸುಮಾರು 10 ಅಡಿ ಉದ್ದ ಹಾವೊಂದು ಕಾಣಿಸಿಕೊಂಡಿತ್ತು. ಇದೀಗ ಮತ್ತೆ ಬೋಯಿಂಗ್ 747 ವಿಮಾನದಲ್ಲಿ ಹಾವು ಕಾಣಿಸಿಕೊಂಡಿದೆ. ಹಾವುಗಳೂ ಕೂಡ ವಿಮಾನಯಾನಕ್ಕೆ ಮಾರುಹೋದಂತಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.

ವೆಬ್ದುನಿಯಾವನ್ನು ಓದಿ