ವಿರಸ ಕೈಬಿಡಿ - ಪಾಕ್ ಆರ್ಮಿ ವರಿಷ್ಠ ಕಯಾನಿ

ಶನಿವಾರ, 3 ಜನವರಿ 2009 (20:35 IST)
ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ಭವಗೊಂಡಿರುವ ಯುದ್ಧ ಭೀತಿಗೆ ಸಂಬಂಧಿಸಿದಂತೆ ಮೌನ ಮುರಿದಿರುವ ಪಾಕ್ ಆರ್ಮಿ ವರಿಷ್ಠ ಕಯಾನಿ, ವಿರಸವನ್ನು ಬದಿಗೊತ್ತುವಂತೆ ಸಲಹೆ ನೀಡಿದ್ದಾರೆ.

ಆ ನಿಟ್ಟಿನಲ್ಲಿ ಆರ್ಮಿ ಜನರಲ್ ಅಶ್ಪಾಕ್ ಪರ್ವೆಜ್ ಕಯಾನಿ ಅವರ ಪ್ರತಿಕ್ರಿಯೆ ಹೊರಬಿದ್ದಿದ್ದು, ಪಾಕಿಸ್ತಾನ ನಾಲ್ಕನೇ ಬಾರಿಗೆ ಭಾರತದೊಂದಿಗೆ ಯುದ್ಧ ಬಯಸುತ್ತಿಲ್ಲ ಎಂಬ ಬಲವಾದ ಸಂದೇಶವನ್ನು ನೀಡಿದಂತಾಗಿದೆ.

ಮುಂಬೈಯ ದಾಳಿಯ ಹಿಂದೆ ಪಾಕ್ ಮೂಲದ ಉಗ್ರರ ಕೈವಾಡ ಇದೆ ಎಂಬುದಾಗಿ ಭಾರತ ಸಾಕ್ಷ್ಯಾಧಾರಗಳನ್ನು ನೀಡಿದರೂ ಕೂಡ ಅದನ್ನು ಬಲವಾಗಿ ಅಲ್ಲಗಳೆಯುತ್ತಿರುವ ಪಾಕ್ ಧೋರಣೆಯಿಂದಾಗಿ ಭಾರತ ಮತ್ತು ಪಾಕ್ ನಡುವೆ ಯುದ್ಧ ಭೀತಿ ಎದುರಾಗಿತ್ತು. ಅಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್ ಮೇಲೆ ಒತ್ತಡ ಹೆಚ್ಚುತ್ತಿದ್ದು, ಇದೀಗ ಯುದ್ಧದ ಬಗ್ಗೆ ಪಾಕ್ ಮೃಧು ಧೋರಣೆ ತಾಳುತ್ತಿದೆ.

ಚೀನಾದ ವಿದೇಶಾಂಗ ಉಪಸಚಿವ ಯಾಫೈ ಜತೆ ಮಾತುಕತೆ ನಡೆಸಿದ ಬಳಿಕ ಕಯಾನಿ ಈ ಹೇಳಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ