ವಿಶ್ವದ ಅಗ್ರ 100 ಮೇಧಾವಿಗಳಲ್ಲಿ 7 ಭಾರತೀಯರು

ಮಂಗಳವಾರ, 6 ಮೇ 2008 (12:30 IST)
ವಿಶ್ವದ ಅಗ್ರಮಾನ್ಯ 100 ಮೇಧಾವಿಗಳಲ್ಲಿ ಏಳು ಮಂದಿ ಭಾರತೀಯರು ಸ್ಥಾನ ಪಡೆದಿದ್ದು, ಭಾರತೀಯರು ಬೌದ್ಧಿಕತೆ ಮತ್ತೊಮ್ಮೆ ಸಾಬೀತಾಗಿದೆ.

ಅಲ್ ಗೋರೆ, ನೋಮ್ ಚೋಮ್‌ಸ್ಕಿ, ಫ್ರಾನ್ಸಿಸ್ ಫುಕುಯಮ, ಉಂಬೆರ್ಟೋ ಇಕೋ, ಲೀ ಕೌನ್ ಯೀ ಇವರುಗಳೊಂದಿಗೆ, ಭಾರತದಲ್ಲಿ ನೆಲೆಸಿರುವ ಇತಿಹಾಸ ತಜ್ಞ ರಾಮಚಂದ್ರ ಗುಹ, ರಾಜಕೀಯ ಮನೋವಿಜ್ಞಾನಿ ಆಶಿಸ್ ನಂದಿ, ಪರಿಸರತಜ್ಞೆ ಸುನಿತಾ ನಾರಾಯಿನ್ ಇವರ ಹೆಸರುಗಳೂ ಸೇರಿವೆ.

ಪಟ್ಟಿಯಲ್ಲಿ ನಾಲ್ಕು ಅನಿವಾಸಿ ಭಾರತೀಯರು ಸೇರಿದ್ದಾರೆ. ನೋಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಮಾರ್ತ್ಯ ಸೇನ್, ಪತ್ರಕರ್ತ ಲೇಖಕ ಫರೀದ್ ಝಕಾರಿಯಾ, ವಿವಾದಾಸ್ಪದ ಸಾಹಿತಿ ಸಲ್ಮಾನ್ ರಶ್ದಿ, ಸಾನ್ ಡಿಯಾಗೊ ಮೂಲದ ನರವಿಜ್ಞಾನಿ ವಿ.ಎಸ್.ರಾಮಚಂದ್ರನ್ ಅವರುಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ತಲಾ ಒಬ್ಬ ವ್ಯಕ್ತಿಯ ಹೆಸರು ಈ ಪಟ್ಟಿಯಲ್ಲಿದ್ದರೆ, ಚೀನದ ಏಳು ಮೇಧಾವಿಗಳು ಸ್ಥಾನ ಪಡೆದಿದ್ದಾರೆ.

ಫಾರಿನ್ ಪಾಲಿಸಿ ಮ್ಯಾಗಸೀನ್ ಪತ್ರಿಕೆಯ ಇತ್ತೀಚಿನ ಆವೃತ್ತಿಯು ವಿಶ್ವದ 100 ಮೇಧಾವಿಗಳನ್ನು ಪಟ್ಟಿ ಮಾಡಿದೆ.

ವೆಬ್ದುನಿಯಾವನ್ನು ಓದಿ