ವಿಶ್ವಪ್ರವಾಸಿ ಸಂಸ್ಥೆಗೆ ಭಾರತದ ಮುಖಂಡತ್ವ

ಶುಕ್ರವಾರ, 30 ನವೆಂಬರ್ 2007 (19:06 IST)
ಸಂಯುಕ್ತ ರಾಷ್ಟ್ರಗಳ ವಿಶ್ವ ಪ್ರವಾಸಿ ಸಂಸ್ಥೆಗೆ ಭಾರತ ಅವಿರೋಧವಾಗಿ ಆಯ್ಕೆಯಾಗಿದೆ.

ಸಂಯುಕ್ತ ರಾಷ್ಟ್ರಗಳ ವಿಶ್ವ ಪ್ರವಾಸಿ ಸಂಸ್ಥೆಯ 82ನೇಯ ಕಾರ್ಯಕಾರಿ ಸಭೆಯಲ್ಲಿ ಭಾರತವನ್ನು ಅವಿರೋಧವಾಗಿ ಆಯ್ಕೆಮಾಡಲಾಯಿತು. ಹೆಚ್ಚುತ್ತಿರುವ ಭೂಮಿ ಬಿಸಿಯ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಕೊಲಂಬಿಯಾ ಎಚ್ಚರಿಕೆ ನೀಡಿತು.

ಭೂ ತಾಪದ ಏರಿಕೆಯನ್ನು ಪ್ರವಾಸಿ ಕೇಂದ್ರಗಳ ರಾಷ್ಟ್ರಗಳು ನಿರ್ಲಕ್ಷ ವಹಿಸದೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಭಾರತದ ಪ್ರವಾಸಿ ಮತ್ತು ಸಾಂಸ್ಕ್ರತಿಕ ಸಚಿವೆ ಅಂಬಿಕಾ ಸೋನಿ ಹೇಳಿದ್ದಾರೆ.

ವಿಶ್ವ ಸಂಸ್ಥೆ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಚರ್ಚಿಸಲು ವಿಶ್ವ ಪ್ರವಾಸಿ ಸಂಸ್ಥೆ ವಾರ್ಷಿಕವಾಗಿ ಎರಡು ಸಭೆಗಳನ್ನು ಕರೆದು ಚರ್ಚಿಸಿ ಪೂರಕ ಅಂಶಗಳ ಬಗ್ಗೆ ನಿರ್ಧರಿಸಿ ಸಲಹೆ ನೀಡುತ್ತದೆ.

ಭಾರತ ವಿಶ್ವ ಪ್ರವಾಸಿ ಸಂಸ್ಥೆಯ ಸಭೆಯಲ್ಲಿ ಪ್ರವಾಸ ಹಾಗೂ ಭೂಮಿಯ ತಾಪ ಕುರಿತಂತೆ ನಿರ್ವಹಿಸಿದ ಕಾರ್ಯವನ್ನು ಶ್ಲಾಘಿಸಲಾಯಿತು.

ಬ್ರೆಜಿಲ್, ಪೆರು, ಚೀನಾ, ಕ್ಯೂಬಾ, ಚಿಲಿ, ಮೆಕ್ಸಿಕೊ, ಮತ್ತು ಅರ್ಜೈಂಟಿನಾ ದೇಶಗಳು ಪ್ರವಾಸೋದ್ಯಮವನ್ನು ದೇಶದ ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಬದಲಾವಣೆ ತರುವಂತೆ ರೂಪಿಸಬೇಕು ದಾವೋಸ್ ನಿರ್ಣಯವನ್ನು ಜಾರಿಗೆ ತರಬಾರದು ಎಂದು ಮನವಿ ಮಾಡಿದವು.

ವೆಬ್ದುನಿಯಾವನ್ನು ಓದಿ