ವಿಶ್ವ ಪರಂಪರೆ ಪಟ್ಟಿಗೆ ಮೂರು ಪ್ರದೇಶಗಳ ಸೇರ್ಪಡೆ

ಸೋಮವಾರ, 7 ಜುಲೈ 2008 (17:54 IST)
ಮಾರಿಷಿಯಸ್ ಗುಲಾಮರ ಅಡಗುತಾಣ, ಅರೇಬಿಯಾದ ನಬಾಟೇನ್ ಪುರಾತತ್ವ ಸ್ಥಳ ಮತ್ತು ಚೀನಾದ ಫುಜಿಯಾನ್ ಟೋಲೋ ಮಣ್ಣಿನ ಮನೆಗಳು ಸೇರಿದಂತೆ ಮೂರು ನೂತನ ಸ್ಥಳಗಳನ್ನು ಯುನೆಸ್ಕೋದ ವಿಶ್ವ ಪರಂಪರ ಸಮಿತಿಯು ತನ್ನ ಪರಂಪರೆ ಪಟ್ಟಿಗೆ ಸೇರಿಸಿಕೊಂಡಿದೆ.

ಅರೇಬಿಯಾದ ನಬಾಟೇನ್ ಅತಿ ಪುರಾತನ ಸ್ಥಳವಾಗಿದ್ದು, ಸೌದಿ ಅರೇಬಿಯಾದ ಪ್ರಥಮ ವಿಶ್ವಪರಂಪರೆಯ ಸ್ಥಳವಾಗಿದೆ.

12 ಮತ್ತು 20ನೇ ಶತಮಾನದಲ್ಲಿ ನಿರ್ಮಿಸಿದ್ದ 46 ಮನೆಗಳ ತುಲೋ ಆಸ್ತಿ ಕೂಡಾ ಪರಂಪರೆಯ ಪಟ್ಟಿಯಲ್ಲಿ ಸೇರಿದ್ದು, ಈ ನೂತನ ಪ್ರದೇಶಗಳ ಸೇರ್ಪಡೆಯಿಂದ ಯುನೆಸ್ಕೋದ ವಿಶ್ವಪರಂಪರೆ ಪಟ್ಟಿಗೆ 140 ರಾಷ್ಟ್ರಗಳ 854 ಸ್ಥಳಗಳು ಸೇರಿದಂತಾಗಿದೆ.

ಒಟ್ಟು 21 ಸದಸ್ಯರನ್ನೊಳಗೊಂಡ ವಿಶ್ವ ಪರಂಪರ ಸಮಿತಿಯು ತನ್ನ ಪರಂಪರ ಪಟ್ಟಿಗೆ ಹೆಚ್ಚುವರಿ 40 ಪ್ರದೇಶಗಳನ್ನು ಸೇರಿಸಿಕೊಳ್ಳಲು ಜುಲೈ ಹತ್ತರವರೆಗೆ ಸಂಶೋಧನೆಯನ್ನು ನಡೆಸಲಿದೆ.

ವೆಬ್ದುನಿಯಾವನ್ನು ಓದಿ