ಶನಿಗ್ರಹದ ಚಿತ್ರ ನಾಸಾ ಬಿಡುಗಡೆ: ಚುಕ್ಕಿಯಂತೆ ಕಾಣುವ ಭೂಮಿ

ಬುಧವಾರ, 13 ನವೆಂಬರ್ 2013 (19:30 IST)
PR
PR
ನ್ಯೂಯಾರ್ಕ್: ನಾಸಾ ಶನಿ ಗ್ರಹದ ನೈಸರ್ಗಿಕ ಬಣ್ಣದ ಪ್ರಪ್ರಥಮ ಚಿತ್ರವನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಏಳು ಚಂದ್ರಗಳು,ಉಂಗುರಗಳು ,ಭೂಮಿ, ಶುಕ್ರ, ಮಂಗಳ ಎಲ್ಲವೂ ಗೋಚರಿಸುತ್ತಿದೆ.ನಾಸಾದ ಕ್ಯಾಸಿನಿ ನೌಕೆ ತೆಗೆದ ಶನಿ ಮಂಡಲದ ಈ ದೃಶ್ಯವನ್ನು ವಾಶಿಂಗ್ಟನ್ ನ್ಯೂಸಿಯಂನಲ್ಲಿ ಬಿಡುಗಡೆ ಮಾಡಲಾಯಿತು. ಕ್ಯಾಸಿನಿಯ ಚಿತ್ರತಂಡ 141 ವಿಶಾಲ ಕೋನದ ಚಿತ್ರಗಳನ್ನು ಸಂಸ್ಕರಿಸಿ ಈ ವಿಹಂಗಮ ನೋಟವನ್ನು ಸೃಷ್ಟಿಸಿದ್ದಾರೆ. ಚಿತ್ರವು ಶನಿಗ್ರಹದ ಮತ್ತು ಅದರ ಉಂಗುರ ವ್ಯವಸ್ಥೆಯ 651, 591 ಕಿಲೋಮೀಟರ್ ವ್ಯಾಪಿಸಿದೆ.

ಜಗತ್ತಿನ ಎಲ್ಲಡೆ ಜನರು ಶನಿ ಗ್ರಹದ ಕೆಳಗೆ ಒಂದು ಸಣ್ಣ ಚುಕ್ಕಿಯಲ್ಲಿ ಸಜೀವವಾಗಿ ಉಳಿದಿರುವುದು ಆಶ್ಚರ್ಯ ಮೂಡಿಸುತ್ತದೆ.ಶುಕ್ರಗ್ರಹ ಶನಿಯ ಎಡಕ್ಕೆ ಮೇಲ್ಭಾಗದಲ್ಲಿ ಹೊಳೆಯುವ ಚುಕ್ಕಿಯಾಗಿದ್ದರೆ, ಮಂಗಳ ಕೆಂಪು ಚುಕ್ಕಿಯಾಗಿ ಶುಕ್ರನಿಗೆ ಎಡಬದಿಯಲ್ಲಿ ಕಾಣುತ್ತದೆ. ಶನಿಯ ಏಳು ಚಂದ್ರರು ಗೋಚರಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ