ಶಿಕಾಗೋ ಅನಿವಾಸಿಗಳ ಬೆಂಬಲ ಪಡೆದ ಕೇಜ್ರಿವಾಲ್

ಮಂಗಳವಾರ, 21 ಮೇ 2013 (14:49 IST)
PTI
ಅಮೆರಿಕದ 20 ನಗರಗಳ ಭಾರತೀಯ ಅಮೆರಿಕನರ ಗುಂಪುಗಳು ವಾರಾಂತ್ಯದಲ್ಲಿ ಶಿಕಾಗೋದಲ್ಲಿ ಸಭೆ ನಡೆಸಿದವು ಮತ್ತು ಸಾಮಾಜಿಕ ಕಾರ್ಯಕರ್ತ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಾರ್ಟಿ ನಡೆಸುತ್ತಿರುವ ರಾಜಕೀಯ ಬದಲಾವಣೆಯ ಆಂದೋಲನಕ್ಕೆ ಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದವು.

ಭ್ರಷ್ಟಾಚಾರ ವಿರೋಧಿ ಕಾರ್ಯಕರ್ತ ಕೇಜ್ರಿವಾಲ್‌ ನಡೆಸುತ್ತಿರುವ ರಾಜಕೀಯ ಆಂದೋಲನದಲ್ಲಿ ಅನಿವಾಸಿ ಭಾರತೀಯ (ಎನ್‌ಆರ್‌ಐ)ರು ನಿರ್ಣಾಯಕ ಪಾತ್ರ ವಹಿಸಬಹುದಾಗಿದೆ ಎಂದು ಮೇ 18ರಂದು ನಡೆದ ಸಭೆಯಲ್ಲಿ ನಿರ್ಣಯವನ್ನು ಸ್ವೀಕರಿಸಲಾಯಿತು.

ನಾವು ಅನಿವಾಸಿ ಭಾರತೀಯರು ಮತ್ತು ಭಾರತೀಯ ಮೂಲದ ಜನರು ಈ ರಾಜಕೀಯ ಪ್ರಯೋಗವನ್ನು ಅತೀವ ಆಸಕ್ತಿಯಿಂದ ನೋಡುತ್ತಿದ್ದೇವೆ ಮತ್ತು ಭಾರತದಲ್ಲಿ ರಾಜಕೀಯ ಸಂಸ್ಕೃತಿಯನ್ನು ಬದಲಿಸಲು ಇಚ್ಛಿಸುತ್ತಿರುವ ಆಮ್‌ ಆದ್ಮಿ ಪಾರ್ಟಿಗೆ ಪೂರ್ಣ ಬೆಂಬಲವನ್ನು ನೀಡುತ್ತೇವೆ ಎಂದು ನಿರ್ಣಯ ಹೇಳಿದೆ. ನಿರ್ಣಯವನ್ನು ಸದಸ್ಯ ಮುನೀಶ್‌ ರಾಯ್‌ಜಾದಾ ಮಂಡಿಸಿದರು.

ಸಮುದಾಯವಾಗಿ, ನಾವು ಸರಕಾರದಿಂದ ನಮ್ಮದೇ ಆದ ನಿರೀಕ್ಷೆಗಳನ್ನು ಇರಿಸಿಕೊಂಡಿದ್ದೇವೆ. ಭಾರತ ಭವ್ಯತೆ, ಸಮೃದ್ಧಿ ಮತ್ತು ನಾಗರಿಕತೆಯ ಸುದೀರ್ಘ‌ ಇತಿಹಾಸವನ್ನು ಹೊಂದಿದೆ ಎನ್ನುವುದನ್ನು ಗಮನದಲ್ಲಿರಿಸಿಕೊಂಡು ರಾಜಕೀಯ ವರ್ಗ ನಮ್ಮ ದೇಶಕ್ಕೆ ನ್ಯಾಯ ಒದಗಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ನಿರ್ಣಯ ತಿಳಿಸಿದೆ.

ಕೇಜ್ರಿವಾಲ್‌ ಅವರು ಲೈವ್‌ ವೀಡಿಯೋ ಕಾನೆ#ರೆನ್ಸ್‌ ಮೂಲಕ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದರು.

ವೆಬ್ದುನಿಯಾವನ್ನು ಓದಿ