ಸಿಂಗ್ 'ಮಿಸ್ಟರ್ ಕ್ಲೀನ್' ಕೀರ್ತಿ ಹೆಚ್ಚು ದಿನ ಉಳಿಯಲ್ಲ: ಪಾಕಿಸ್ತಾನ

ಬುಧವಾರ, 17 ಆಗಸ್ಟ್ 2011 (19:37 IST)
ಭ್ರಷ್ಟಾಚಾರವು ಭಾರತದ ಆಡಳಿತಾರೂಢ ಕಾಂಗ್ರೆಸ್‌ ನೇತೃತ್ವದ ಕೇಂದ್ರ ಸರಕಾರದ ವರ್ಚಸ್ಸಿಗೆ ಧಕ್ಕೆ ತಂದಿದ್ದು, ಪ್ರಧಾನಿ ಮನಮೋಹನ ಸಿಂಗ್‌ ಅವರು ಮಿಸ್ಟರ್‌ ಕ್ಲೀನ್‌ ಎಂಬ ಕೀರ್ತಿಯನ್ನು ಇನ್ನು ಹೆಚ್ಚು ದಿನಗಳ ಕಾಲ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪಾಕಿಸ್ತಾನದ ಮಾಧ್ಯಮವೊಂದು ಬಣ್ಣಿಸಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಭ್ರಷ್ಟಾಚಾರದ ವಿರೋಧಿ ಕಾಯಿದೆಗಾಗಿ ಧ್ವನಿ ಎತ್ತಿರುವ 74 ವರ್ಷದ ಗಾಂಧಿವಾದಿ ಅಣ್ಣಾ ಹಜಾರೆ ಅವರು ಆ.16ರಿಂದ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ ನಂತರ ಅವರನ್ನು ಬಂಧಿಸಿ ಬಿಡುಗಡೆ ಮಾಡಿದ್ದರೂ ಅವರು ಜೈಲಿನಿಂದ ಹೊರ ಹೋಗಲು ನಿರಾಕರಿಸಿದ್ದ ಕುರಿತು 'ದಿ ನ್ಯೂಸ್‌' ಪತ್ರಿಕೆ ಬುಧವಾರ ಸಂಪಾದಕೀಯ ಬರೆದಿದೆ.

ಗಡಿಯಾಚೆಗಿನ ದೇಶದಲ್ಲಿ ಭ್ರಷ್ಟಾಚಾರವು ಇನ್ನೂ ಉಳಿದಿದ್ದು, ಇತ್ತೀಚಿಗೆ ಇದರ ಹಾವಳಿ ಹೆಚ್ಚಾಗಿದೆ. ಭ್ರಷ್ಟಾಚಾರವು ಕಾಂಗ್ರೆಸ್‌ ಪಕ್ಷ ಹಾಗೂ ಪ್ರಧಾನಿ ಮನಮೋಹನ ಸಿಂಗ್‌ ಅವರ ವರ್ಚಸ್ಸಿಗೆ ಧಕ್ಕೆ ತಂದಿದ್ದು, ಈ ಮೊದಲು ಮಿಸ್ಟರ್‌ ಕ್ಲೀನ್‌ ಎಂದೇ ಕರೆಸಿಕೊಳ್ಳುತ್ತಿದ್ದ ಪ್ರಧಾನಿ ಸಿಂಗ್‌ ಆ ಕೀರ್ತಿಯನ್ನು ಇನ್ನು ಹೆಚ್ಚು ದಿನ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ಭ್ರಷ್ಟಾಚಾರ ನಿಗ್ರಹಕ್ಕಾಗಿ ಭಾರತ ಸರಕಾರವೇ ರೂಪಿಸಿರುವ ಲೋಕಪಾಲ್‌ ಮಸೂದೆಯು ವಿವಾದದ ಸುಳಿಯಲ್ಲಿ ಸಿಲುಕಿದೆ.

ಲೋಕಪಾಲ ಮಸೂದೆಯಡಿ ಭಷ್ಟ್ರಾಚಾರದ ವಿರುದ್ಧ ಬಂದಿರುವ ದೂತಳ ಬಗ್ಗೆ ವಿಚಾರಣೆ ನಡೆಸಲು ಓಂಬುಡ್ಸ್‌ಮನ್‌ ಮಾತರಿಯ ಸ್ವತಂತ್ರ ಸಮಿತಿಯೊಂದನ್ನು ರಚಿಸಬೇಕಾಗುತ್ತದೆ.

ಲೋಕಾಪಾಲ ಮಸೂದೆಯಿಂದ ಪ್ರಧಾನ ಮಂತ್ರಿ ಹಾಗೂ ಅವರ ಕಚೇರಿಯನ್ನು ಹೊರಗಿಟ್ಟಿರುವುದು, ಹೀಗೇಕೆ ಮಾಡಲಾಗಿದೆ ಎಂದು ಪ್ರಶ್ನೆಗಳು ಉದ್ಭವಿಸಿವೆ.

ಪ್ರಬಲ ಲೋಕಪಾಲ ಮಸೂದೆಗಾಗಿ ಒತ್ತಾಯಿಸಿರುವ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಭ್ರಷ್ಟಾಚಾರ ವಿರೋಧಿ ಆಂದೋಲನ ನಡೆಸುತ್ತಿದ್ದಾರೆ.

ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಅಣ್ಣಾ ಹಜಾರೆ ಅವರನ್ನು ಬಂಧಿಸಿರುವುದನ್ನು ವಿರೋಧಿಸಿ ಭ್ರಷ್ಟಾಚಾರ ವಿರೋಧಿ ಸಂಘಟನೆಗಳುಹೋರಾಟ ನಡೆಸುತ್ತಿವೆ ಎಂದು ಸಂಪಾದಕೀಯದಲ್ಲಿ ತಿಳಿಸಲಾಗಿದೆ.

ಹಜಾರೆ ಮತ್ತು ಸರಕಾರದ ನಡುವೆ ನಡೆಯುತ್ತಿರುವ ಸಮರ ಕುತೂಹಲಕಾರಿಯಾಗಿದೆ. ಭ್ರಷ್ಟಾಚಾರವನ್ನು ನಿಗ್ರಹಿಸುವ ನಿಟ್ಟಿನಲ್ಲಿ ನಾಗರಿಕ ಸಮಾಜವು ನಡೆಸುತ್ತಿರುವ ಹೋರಾಟವನ್ನು ಬಲ ಪ್ರಯೋಗದಿಂದ ಹತ್ತಿಕ್ಕಲಾಗುತ್ತಿದೆ.

ಪಾಕಿಸ್ತಾನದಲ್ಲೂ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವುದು ಅಗತ್ಯವಾಗಿದೆ ಎಂದು ಹೇಳಿರುವ ಪತ್ರಿಕೆ ಭಾರತದಲ್ಲಿ ಕೆಲವರು ಭ್ರಷ್ಟಾಚಾರದ ವಿರುದ್ಧ ಪರಿಣಾಮಕಾರಿಯಾಗಿ ಹೋರಾಟ ನಡೆಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ವೆಬ್ದುನಿಯಾವನ್ನು ಓದಿ