ಸಿರಿಯಾಗೆ ತೆರಳುವ ಟುನಿಸಿಯಾ ಮಹಿಳೆಯರು ಗರ್ಭಿಣಿಯರಾಗಿ ವಾಪಸ್

ಶುಕ್ರವಾರ, 20 ಸೆಪ್ಟಂಬರ್ 2013 (17:19 IST)
PR
PR
ಟುನಿಸ್: ಟುನಿಸಿಯಾ ಮಹಿಳೆಯರು ಇಸ್ಲಾಮಿಕ್ ಹೋರಾಟಗಾರರ ಲೈಂಗಿಕ ಹಸಿವು ತಣಿಸಲು ಸಿರಿಯಾಗೆ ಪ್ರಯಾಣಿಸಿ ಅಲ್ಲಿ 20, 30, 100 ಹೋರಾಟಗಾರರ ಜತೆ ಲೈಂಗಿಕ ಸಂಬಂಧ ಹೊಂದಿರುತ್ತಾರೆ ಎಂದು ಒಳಾಡಳಿತ ಸಚಿವ ಲಾಟ್ಫಿ ಬೆನ್ ಜೆಡ್ಡೋ ಸಂಸತ್ ಸದಸ್ಯರಿಗೆ ತಿಳಿಸಿದ್ದಾರೆ. ಸಿರಿಯಾಗೆ ತೆರಳಿ ಅವರು ಆಡಳಿತದ ವಿರುದ್ಧ ಹೋರಾಟ ಮಾಡುವ ಇಸ್ಲಾಮಿಕ್ ಹೋರಾಟಗಾರರ ಜತೆ ಸೆಕ್ಸ್ ಜಿಹಾದಿ ನಡೆಸುತ್ತಾರೆ. 'ಜಿಹಾದ್ ಅಲ್ ನಿಕಾ'( ಅರೇಬಿಕ್‌ನಲ್ಲಿ ಲೈಂಗಿಕ ಪವಿತ್ರ ಯುದ್ಧ) ಹೆಸರಿನಲ್ಲಿ ಲೈಂಗಿಕ ಸಂಬಂಧದ ಬಳಿಕ ಅವರು ಗರ್ಭಿಣಿಯರಾಗಿ ಮರಳಿ ಬರುತ್ತಾರೆ. ಎಷ್ಟು ಮಂದಿ ಟುನಿಸಿಯಾ ಮಹಿಳೆಯರು ಜಿಹಾದಿ ಹೋರಾಟಗಾರರ ಮಕ್ಕಳೊಂದಿಗೆ ಗರ್ಭಿಣಿಯರಾಗಿ ದೇಶಕ್ಕೆ ಹಿಂತಿರುಗಿದ್ದಾರೆಂದು ಅವರು ವಿವರಿಸಲು ಹೋಗಲಿಲ್ಲ.

ಜಿಹಾದ್ ಅಲ್ ನಿಕಾ ಎಂದರೆ ಬಹು ಸಂಗಾತಿಗಳೊಂದಿಗೆ ಲೈಂಗಿಕ ಸಂಬಂಧಕ್ಕೆ ಅನುಮತಿ ನೀಡುವುದಾಗಿದೆ. ಇದನ್ನು ಪವಿತ್ರ ಯುದ್ಧದ ಕಾನೂನುಬದ್ಧ ರೂಪ ಎಂದು ಕೆಲವು ಕಟ್ಟಾ ಸುನ್ನಿ ಮುಸ್ಲಿಂ ಹೋರಾಟಗಾರರು ಪರಿಗಣಿಸಿದ್ದಾರೆ. ನೂರಾರು ಟುನಿಸಿಯಾ ಪುರುಷರು ಅಧ್ಯಕ್ಷ ಬಷಾರ್ ಅಲ್ ಅಸಾದ್ ಆಡಳಿತವನ್ನು ಉರುಳಿಸಲು ಜಿಹಾದಿ ಹೋರಾಟಗಾರರ ವರ್ಗಕ್ಕೆ ಸೇರಲು ಹೋಗಿದ್ದಾರೆ. ತಾವು ಮಾರ್ಚ್‌ನಲ್ಲಿ ಅಧಿಕಾರಕ್ಕೆ ಬಂದಾಗಿನಿಂದ 6,000 ಯುವಕರು ಸಿರಿಯಾಗೆ ಹೋಗದಂತೆ ತಡೆದಿರುವುದಾಗಿ ಬೆನ್ ಜೆಡ್ಡೋ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ