ಸೌದಿ ಅರೇಬಿಯಾ ಪ್ರವಾಹಕ್ಕೆ 13 ಮಂದಿ ಬಲಿ

ಗುರುವಾರ, 2 ಮೇ 2013 (10:08 IST)
WD
WD
ಸೌದಿ ಅರೇಬಿಯದಲ್ಲಿ ಉಂಟಾದ ದಿಢೀರ್ ಪ್ರವಾಹಕ್ಕೆ ಕನಿಷ್ಠ 13 ಮಂದಿ ಬಲಿಯಾಗಿದ್ದು, ಇತರ ನಾಲ್ಕು ಮಂದಿ ಇನ್ನೂ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ. ರಾಜಧಾನಿ ರಿಯಾದ್, ದಕ್ಷಿಣದ ಬಹಾ, ಉತ್ತರದ ಹೈಲ್ ಹಾಗೂ ರಾಷ್ಟ್ರದ ಪಶ್ಚಿಮ ಭಾಗದಲ್ಲಿ ಸಾವುಗಳು ಸಂಭವಿಸಿರುವುದಾಗಿ ವರದಿ ತಿಳಿಸಿದೆ.

ಕಳೆದ ಶುಕ್ರವಾರ ಪ್ರಾರಂಭವಾದ ಭಾರೀ ಮಳೆಯಿಂದಾಗಿ ಕಣಿವೆಗಳು ಹಾಗೂ ಬಯಲು ಪ್ರದೇಶಗಳು ಜಲಾವೃತಗೊಂಡಿದ್ದು, ಇಂತಹ ಸ್ಥಳಗಳಿಂದ ದೂರ ತೆರಳುವಂತೆ ಸೌದಿಯ ಪೌರ ರಕ್ಷಣಾ ಪ್ರಾಧಿಕಾರವು ನಾಗರಿಕರನ್ನು ಕೇಳಿಕೊಂಡಿದೆ.

ಕಳೆದ 25 ವರ್ಷಗಳಿಗೂ ಹೆಚ್ಚಿನ ಅವಧಿಯಲ್ಲಿ ಮರುಭೂಮಿಯ ನಾಡಿನಲ್ಲಿ ಈ ವರ್ಷ ಭಾರೀ ಪ್ರಮಾಣದ ಮಳೆ ಸುರಿದಿರುವುದಾಗಿ ಹೇಳಲಾಗಿದೆ. ಮಳೆ ಹಾಗೂ ಪ್ರವಾಹದಿಂದ ಸಂಕಷ್ಟಕ್ಕೊಳಗಾಗಿರುವ ಜನರಿಗೆ ನೆರವು ಒದಗಿಸುವಂತೆ ಹಾಗೂ ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತಗೊಳಿಸುವಂತೆ ನಾಗರಿಕ ರಕ್ಷಣಾ ಅಧಿಕಾರಿಗಳಿಗೆ ಸೌದಿಯ ಒಳಾಡಳಿತ ಸಚಿವ ರಾಜಕುಮಾರ ಮುಹಮ್ಮದ್ ಬಿನ್ ನಯೀಫ್ ಆದೇಶಿಸಿದ್ದಾರೆ.

ವೆಬ್ದುನಿಯಾವನ್ನು ಓದಿ