ಸ್ವರ್ಗದಲ್ಲಿ ಚೆಸ್: ಸ್ನೇಹಿತನ ಹತ್ಯೆ ಮಾಡಿ ಆತ್ಮಹತ್ಯೆ ಮಾಡಿಕೊಂಡ

ಶನಿವಾರ, 28 ಡಿಸೆಂಬರ್ 2013 (16:25 IST)
PR
PR
ಬೀಜಿಂಗ್: 54 ವರ್ಷ ವಯಸ್ಸಿನ ಚೀನಾದ ವ್ಯಕ್ತಿಯೊಬ್ಬ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಮುಂಚೆ ತನ್ನ ನೆರೆಮನೆಯಲ್ಲಿದ್ದ ಸ್ನೇಹಿತನನ್ನು ಕೂಡ ಹತ್ಯೆ ಮಾಡಿದ. ಅವನ ಸ್ನೇಹಿತ ಅವನಿಗೆ ಚೆಸ್‌ ಸಂಗಾತಿಯಾಗಿದ್ದ. ಅವನ ಜತೆ ಚೆಸ್ ಪಂದ್ಯವಾಡುವುದಕ್ಕೆ ಸ್ನೇಹಿತ ಸಾಥ್ ನೀಡುತ್ತಿದ್ದ. ಆದರೆ ತಾನು ಆತ್ಮಹತ್ಯೆ ಮಾಡಿಕೊಂಡು ಸತ್ತ ಮೇಲೆ ತನಗೆ ಸ್ವರ್ಗದಲ್ಲಿ ಸಾಥ್ ನೀಡುವವರು ಯಾರು ಎಂಬ ಚಿಂತೆ ಅವನನ್ನು ಕಾಡಿತ್ತು. ಅದಕ್ಕಾಗಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಮುಂಚೆ ಅವನು ನೆರೆಮನೆಯವನನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ. ಲಿಯಾವೊ ಎಂಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಮುಂಚೆ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ಈ ವಿಷಯ ತಿಳಿಸಿದ್ದಾನೆ.

ಬಾಡಿಗೆ ವಸೂಲಿಗೆ ಜಿನಾಹುನಲ್ಲಿರುವ ಮನೆಗೆ ಮಾಲೀಕರು ಬಂದಾಗ ನೆರೆಮನೆಯವ ಸತ್ತುಬಿದ್ದಿರುವುದು ಅವಳಿಗೆ ಪತ್ತೆಯಾಯಿತು. ನಂತರ ಪೊಲೀಸರು ತನಿಖೆ ನಡೆಸಿದಾಗ ನೆರೆಮನೆಯವನ ಕುತ್ತಿಗೆ ಹಿಚುಕಿ ಕೊಂದಿರುವುದು ಪತ್ತೆಯಾಗಿದೆ. ಲಿಯಾವೋನ ದೇಹ ಕೂಡ ಪಕ್ಕದ ಕೋಣೆಯಲ್ಲಿ ಪತ್ತೆಯಾಯಿತು. ಕೋಣೆಯಲ್ಲಿ ಎರಡು ನೋಟ್‌ಗಳು ಮತ್ತು ಕೆಲವು ಮಾದಕವಸ್ತುಗಳು ಪತ್ತೆಯಾಗಿವೆ. ಲಿಯಾವೋ ಕುಟುಂಬದ ಸಂಘರ್ಷಗಳಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದ. ಲಿಯಾವೋ ಸಮಾಜದಲ್ಲಿ ಹೆಚ್ಚು ಬೆರೆಯುತ್ತಿರಲಿಲ್ಲ ಎಂದು ಮಾಲೀಕೆ ಹೇಳಿದ್ದಾಳೆ.

ವೆಬ್ದುನಿಯಾವನ್ನು ಓದಿ