ಹಿಂದೂ ದೇವತೆಗೆ ಅವಮಾನ ; ಬಿಕಿನಿಗಳ ಮೇಲೆ ರಾಧಾ ಕೃಷ್ಣನ ಫೋಟೋ..!

ಸೋಮವಾರ, 23 ಸೆಪ್ಟಂಬರ್ 2013 (13:35 IST)
PTI
PTI
ಅದು ಮ್ಯಾಡ್ರಿಡ್‌ ಫ್ಯಾಷನ್‌ ವೀಕ್‌.. ಬೆಡಗಿಯರೆಲ್ಲಾ ತುಂಡು ತುಂಡು ಬಟ್ಟೆ ತೊಟ್ಟು ಬಳುಕುತ್ತ ಬರುವ ಮಾದಕ ಕ್ಷಣ.. ಥಳುಕು ಬಳುಕು ವೈಯ್ಯಾರವನ್ನು ಸೊಂಟದಲ್ಲಿಟ್ಟುಕೊಂಡು ಮಾದಕ ಹೆಜ್ಜೆಯನಿಡುತ್ತ ಬಳುಕುತ್ತಾ ಬರುತ್ತಿದ್ದರು.. ಅದು ಪಕ್ಕಾ ಬಿಕಿನಿ ಫ್ಯಾಷನ್‌ ಶೋ ಆಗಿತ್ತು. ಹೀಗೆ ನೋಡ ನೋಡುತ್ತಿದ್ದಂತೆಯೇ ಒಬ್ಬ ಬಾಲೆ ಫ್ಯಾಷನ್‌ ಬಿಕಿನಿಯನ್ನು ಧರಿಸಿ ಧಿರಿಸಿನಿಂದ ಹೆಜ್ಜೆ ಹಾಕುತ್ತ ಬರುತ್ತಿದ್ದಳು. ಆ ಬಿಕಿನಿಯ ಮೇಲೆ ರಾಧಾ ಕೃಷ್ಣರ ಫೋಟೋ ಇದ್ದುದು ಕಂಡು ಬಂತು.

2013ರ ಮ್ಯಾಡ್ರಿಡ್‌ ಫ್ಯಾಷನ್‌ ವೀಕ್‌ನ ಡಾಲರ‍್ಸ್‌ ಕರ್ಟೆಸ್‌ ಬಿಕಿನಿ ಶೋನಲ್ಲಿ ಹೆಜ್ಜೆ ಹಾಕುತ್ತ ಬಂದ ರೂಪದರ್ಶಿಯು ತನ್ನ ಬಿಕಿನಿ ಮೇಲೆ ರಾಧಾ ಕೃಷ್ಣರ ಫೋಟೋವನ್ನು ಹಾಕಿಸಿಕೊಂಡು ಹಿಂದೂ ದೇವತೆಗಳ ಅವಮಾನ ಮಾಡಿದ್ದಾಳೆ. ಹಿಂದೂ ದೇವತೆಗಳನ್ನು ಹೊತ್ತ ಬಿಕಿನಿ ನಾರಿಯ ಫೋಟೋ ಅಂತರ್ಜಾಲದಲ್ಲಿ ಮಿಂಚಿನ ವೇಗದಲ್ಲಿ ಹರಿದಾಡುತ್ತಿದೆ.

ಹಿಂದೂ ದೇವತೆಗಳನ್ನು ಬಿಕಿನಿಯ ಮೇಲೆ ಚಿತ್ರೀಕರಿಸಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಕೂಡ ಲಕ್ಷ್ಮಿ ದೇವತೆಯ ಫೋಟೋವನ್ನು ಬಿಕಿನಿ ಮೇಲೆ ಚಿತ್ರೀಕರಿಸಿ ಅವಮಾನ ಮಾಡಲಾಗಿತ್ತು. ಗಣೇಶನ ಫೋಟೋ ಕೂಡ ಬಿಕಿನಿಯ ಮೇಲೆ ಚಿತ್ರಿಸಲಾಗಿತ್ತು. ಇದೀಗ ರಾಧಾ ಕೃಷ್ಣರ ಫೋಟೋವನ್ನು ಚಿತ್ರಿಸಲಾಗಿದೆ.

ವೆಬ್ದುನಿಯಾವನ್ನು ಓದಿ