ಹುಟ್ಟುಹಬ್ಬದಂದು ಪೂರ್ತಿ ಬೆತ್ತಲಾಗ್ತೀನೆ :ಬ್ರಿಟನ್‌ನ ಮಾಡೆಲ್‌ ಕೇಟ್‌ ಮಾಸ್‌

ಸೋಮವಾರ, 31 ಮಾರ್ಚ್ 2014 (14:10 IST)
ಹುಟ್ಟುಹಬ್ಬದ ದಿನ ಹೊಸಬಟ್ಟೆ ತೊಟ್ಟು ಸಂಭ್ರಮ ಪಡುವುದು ಗೊತ್ತು. ಆದರೆ ಬ್ರಿಟನ್‌ನ ಮಾಡೆಲ್‌ ಒಬ್ಬಳಿಗೆ ಅದೇನೋ ಹುಚ್ಚು ಆಸೆ ಬಂದಿದೆಯೋ ಗೊತ್ತಿಲ್ಲ, ಹುಟ್ಟು ಹಬ್ಬದ ದಿನ ಹುಟ್ಟಿದುಡುಗೆಯಲ್ಲೇ ಕಾಣಿಸಿಕೊಳ್ಳಲು ನಿರ್ಧರಿಸಿದ್ದಾಳೆ.

ಬ್ರಿಟನ್‌ನ ಮಾಡೆಲ್‌ ಕೇಟ್‌ ಮಾಸ್‌ ಶೀಘ್ರವೇ ತನ್ನ 40ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾಳೆ. ಸುಮ್ಮನೆ ಆಚರಿಸಿಕೊಂಡರೆ ಹೇಗೆ, ಸ್ವಲ್ಪವಾದ್ರೂ ಭಿನ್ನವಾಗಿರಬೇಕಲ್ಲ. ಹಾಗಾಗಿ ಹುಟ್ಟುಹಬ್ಬದಂದು ಪೂರ್ತಿ ಬೆತ್ತಲಾಗ್ತೀನೆ ಎಂದು ಘೋಷಿಸಿಬಿಟ್ಟಿದ್ದಾಳೆ.

ಇನ್ನು ಇಂತಹ ಫೋಟೋಗಳಿಗಾಗಿಯೇ ಹೊಂಚು ಹಾಕಿ ಕುಳಿತುಕೊಳ್ಳುವ ಪ್ಲೇಬಾಯ್‌ ಮ್ಯಾಗಜೀನ್‌ ಕೂಡಾ 2014ರಲ್ಲಿ ತನ್ನ 60ನೇ ವರ್ಷಾಚರಣೆ ಆಚರಿಸಿಕೊಳ್ಳಲಿದ್ದು, ಈ ಸಂಚಿಕೆಯಲ್ಲಿ ಕೇಟ್‌ಳ ವಿಶೇಷ ಫೋಟೋ ಪ್ರಕಟಿಸಲು ನಿರ್ಧರಿಸಿದೆಯಂತೆ.

ವೆಬ್ದುನಿಯಾವನ್ನು ಓದಿ