ಹೆಚ್‌ಐವಿ ವೈರಸ್‌‌ಗೆ ಬ್ರೇಕ್ : ಇನ್ನುಮುಂದೆ ಏಡ್ಸ್‌ಗೆ ಹೆದರಬೇಕಿಲ್ಲ.

ಶನಿವಾರ, 30 ನವೆಂಬರ್ 2013 (12:43 IST)
PTI
PTI
ಮಾರಣಾಂತಿಕ ರೋಗಕ್ಕೆ ಮದ್ದು ಸಿಕ್ಕಿದೆ. ಇನ್ನುಮುಂದೆ ಹೆಚ್‌ಐವಿ ಬಂದಿದೆ ಅಂತ ಯಾರೂ ಕೂಡ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಯಾಕೆಂದ್ರೆ ಹೆಚ್‌ಐವಿ ಎಂಬ ಭಯಾನಕ ರೋಗಕ್ಕೆ ಇದೀಗ ಮದ್ದು ಸಿಕ್ಕಿದೆ. ಫ್ರಾನ್ಸ್ ವಿಜ್ಞಾನಿಗಳು ಹೆಚ್‌ಐವಿ ವೈರಸ್‌ಗಳ ಹಾವಳಿಗೆ ಬ್ರೇಕ್ ಹಾಕುವಂತಹ ಮದ್ದನ್ನು ಕಂಡು ಹಿಡಿದಿದ್ದಾರೆ.


ಫ್ರಾನ್ಸ್‌ ದೇಶದ ಜೋಸ್ ಗಾಲ್ಲೆಗೊ ನೇತೃತ್ವದ ವಿಜ್ಞಾನಿಗಳ ತಂಡ ಕೃತಕ ಅಣುಗಳನ್ನು ವಿನ್ಯಾಸಗೊಳಿಸಿದ್ದಾರೆ. ಅಂದ್ರೆ ಸಿಂಥೆಟಿಕ್ ಮಾಲಿಕ್ಯುಲ್ ಎಂಬಂತಹ ಅಣುಗಳನ್ನು ಜೋಸ್ ಗಾಲ್ಲೆಗೊ ಮತ್ತು ತಂಡ ವಿನ್ಯಾಸಗೊಳಿಸಿದ್ದು, ಈ ಅಣುಗಳ ಮೂಲಕ ಹೆಚ್‌ಐವಿ ವೈರಸ್‌ ಡಬಲ್ ಆಗದಂತೆ ತಡೆಯುವ ಸಾಹಸ ಮಾಡಿದ್ದಾರೆ.

ಈ ಸಿಂಥೆಟಿಕ್‌ ಮಾಲಿಕ್ಯುಲ್‌ ಅಣುಗಳು ಹೆಚ್‌ಐವಿ ವೈರಸ್‌ನ ಜೆನಟಿಕ್ ಮೆಟೀರಿಯಲ್‌ನ ಹೊರಭಾಗಕ್ಕೆ ಅಂಟಿಕೊಳ್ಳುತ್ತದೆ. ಹೀಗಾದಾಗ ಹೆಚ್‌ಐವಿ ವೈರಸ್‌ ಡಬಲ್ ಆಗುವುದಿಲ್ಲ. ಅಂದ್ರೆ ವೈರಸ್‌ ಮರುಸೃಷ್ಟಿಯಾಗುವುದನ್ನು ಈ ವಿನ್ಯಾಸಿತ ಅಣುಗಳು ತಡೆಯುತ್ತವೆ. ಈ ಮೂಲಕ ಅದು ಹೆಚ್‌ಐವಿ ವೈರಸ್‌ ಪಡಿಯಚ್ಚುಗೊಳ್ಳುವುದನ್ನು ತಡೆಯುತ್ತದೆ. ಹೀಗಾದಾಗ ಸೋಂಕು ಇತರೆ ಜೀವಕೋಶಗಳಿಗೆ ಹರಡುವುದನ್ನು ತಡೆಯುತ್ತದೆ.

ವೆಬ್ದುನಿಯಾವನ್ನು ಓದಿ