ಹೈಟಿಯನ್ನು 3ನೆ ಬಾರಿ ನಡುಗಿಸಿದ ಭೂಕಂಪ

ಸೋಮವಾರ, 25 ಜನವರಿ 2010 (17:46 IST)
ಪ್ರಬಲ ಭೂಕಂಪದಿಂದ ತತ್ತರಿಸಿ ಹೋಗಿರುವ ಪೋರ್ಟ್ ಅ ಪ್ರಿನ್ಸ್‌ನ ಹೈಟಿಯಲ್ಲಿ ಮತ್ತೆ 3ನೇ ಬಾರಿಗೆ ಭೂಕಂಪ ಸಂಭವಿಸಿದ್ದು, ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೈಟಿ ನಗರದಿಂದ 30ಕಿ.ಮೀ.ದೂರದಲ್ಲಿರುವ ಪಶ್ಚಿಮ ಭಾಗದಲ್ಲಿ ಸೋಮವಾರ ಮತ್ತೆ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 4.7ರಷ್ಟು ಕಂಪನದ ತೀವ್ರತೆ ದಾಖಲಾಗಿದೆ ಎಂದು ಅಮೆರಿಕದ ಭೂ ವಿಜ್ಞಾನ ಇಲಾಖೆ ಹೇಳಿದೆ.

ಇಂದು ಮುಂಜಾನೆ 3ನೇ ಬಾರಿಗೆ ಹೈಟಿ ನಗರದಲ್ಲಿ ಭೂಕಂಪನ ಸಂಭವಿಸಿದ್ದು, ಭೂಕಂಪದ ಕೇಂದ್ರ ಬಿಂದು ಭೂಮಿಯ 30ಕಿ.ಮೀ. ಆಳದಲ್ಲಿ ಹುದುಗಿತ್ತು ಎಂದು ಇಲಾಖೆ ತಿಳಿಸಿದೆ.

ಹೈಟಿ ನಗರಿಯನ್ನು ತಲ್ಲಣಿಸಿದ ಭೂಕಂಪದಿಂದಾಗಿ ಮೂರು ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಏತನ್ಮಧ್ಯೆ ಭೂಕಂಪದಿಂದ ಬೀದಿ ಪಾಲಾದ ಸಂತ್ರಸ್ತರಿಗೆ ನೆರವು ನೀಡಲು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದೇಣಿಗೆ ಸಂಗ್ರಹಿಸಲು ನಿರ್ಧರಿಸಿದೆ.

ವೆಬ್ದುನಿಯಾವನ್ನು ಓದಿ