ನೇಪಾಳ ಭೂಕಂಪದಲ್ಲಿ 10 ಸಾವಿರ ಐರೋಪ್ಯ ಜನರು ನಾಪತ್ತೆ

ಶುಕ್ರವಾರ, 1 ಮೇ 2015 (20:18 IST)
ಕಳೆದ ವಾರ ನೇಪಾಳದಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದ ನಾಪತ್ತೆಯಾದ ಸಾವಿರಾರು ಜನರನ್ನು ಪತ್ತೆ ಹಚ್ಚಲು ನೇಪಾಳಿ ಮತ್ತು ವಿದೇಶಿ ಅಧಿಕಾರಿಗಳು ಹೆಣಗಾಡುತ್ತಿರುವ ನಡುವೆ, ಸುಮಾರು 10,000 ಐರೋಪ್ಯ ಜನರು ನಾಪತ್ತೆಯಾಗಿರುವ ಸಂಗತಿ ವರದಿಯಾಗಿದೆ.  ಜನಪ್ರಿಯ ಟ್ರೆಕ್ಕಿಂಗ್ ಮಾರ್ಗಗಳಲ್ಲಿ ಇವರು ಕಾಣೆಯಾಗಿದ್ದಾರೆ ಎಂದು ಐರೋಪ್ಯ ಒಕ್ಕೂಟದ ನಿಯೋಗದ ಮುಖ್ಯಸ್ಥರು ತಿಳಿಸಿದ್ದಾರೆ.
 
ಅವರು ಎಲ್ಲಿದ್ದಾರೆಂಬುದು ನಮಗೆ ಗೊತ್ತಿಲ್ಲ ಎಂದು ಇಯು ರಾಯಭಾರಿ ರೆನ್ಸ್ ಜೆ ಟೇರಿಕ್ ತಿಳಿಸಿದರು. ಅನೇಕ ಮಂದಿ ರಾಯಭಾರ ಕಚೇರಿಯಲ್ಲಿ ಹೆಸರನ್ನು ನೋಂದಣಿ ಮಾಡದಿರುವುದರಿಂದ ಕಣ್ಮರೆಯಾದವರನ್ನು ಪತ್ತೆ ಹಚ್ಚುವುದು ಕಷ್ಟ ಎಂದು ಅವರು ಹೇಳಿದರು. 
 
ಐರೋಪ್ಯ ನಾಗರಿಕರು ಅಷ್ಟೊಂದು ಅಗಾಧ ಸಂಖ್ಯೆಯಲ್ಲಿ ನಾಪತ್ತೆಯಾಗಿರುವ ಬಗ್ಗೆ ತಮಗೆ ಮಾಹಿತಿ ಇರಲಿಲ್ಲ ಎಂದು ನೇಪಾಳ ಗೃಹ ಸಚಿವಾಲಯ ತಿಳಿಸಿದೆ.  ಎಂಬಸಿಗಳು ನಮಗೆ ಏಕೆ ಮಾಹಿತಿ ನೀಡಲ್ಲ. ನೇಪಾಳ ಸರ್ಕಾರವನ್ನು ಅವರೇಕೆ ಸಂಪರ್ಕಿಸಿಲ್ಲ ಎಂದು ಸಚಿವಾಲದ ವಕ್ತಾರ ಪ್ರಶ್ನಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ