ಬಾಂಗ್ಲಾದಲ್ಲಿ ಇಸ್ಕಾನ್ ಮಂದಿರದ ಮೇಲೆ ದಾಳಿ: 10 ಮಂದಿಗೆ ಗಾಯ

ಶನಿವಾರ, 3 ಸೆಪ್ಟಂಬರ್ 2016 (17:56 IST)
ಸಿಲೆಟ್ ಇಸ್ಕಾನ್ ಮಂದಿರದಲ್ಲಿ ಹಿಂದು ಭಕ್ತರು ಮತ್ತು ಸಮೀಪದ ಮಸೀದಿಯ ಮುಸ್ಲಿಂ ಭಕ್ತರ ನಡುವೆ ಘರ್ಷಣೆ ಸಂಭವಿಸಿದೆ. ಭೂ ವಿವಾದಕ್ಕೆ ಸಂಬಂಧಿಸಿದ ಈ ಘರ್ಷಣೆಯಲ್ಲಿ ಕನಿಷ್ಟ 10 ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ. ಮಾಜಿ ವಾರ್ಡ್ ಸದಸ್ಯ ಜೆಬುನಾರ್ ಶಿರಿನ್ ಮತ್ತು ಇಸ್ಕಾನ್ ಮಂದಿರ ನೌಕರ ರಾಜೇಂದ್ರ ಕೇಶಬ್ ದಾಸ್ ಈ ಘರ್ಷಣೆಯಲ್ಲಿ ಗಾಯಗೊಂಡಿದ್ದಾರೆ. 
 
ಶುಕ್ರವಾರದ ಪ್ರಾರ್ಥನೆ ನಂತರ ಈ ಘರ್ಷಣೆ ಸಂಭವಿಸಿದ್ದು, ಮುಸ್ಲಿಂ ಭಕ್ತರು ಮಂದಿರದಲ್ಲಿ ಹಾಡುವ ಭಕ್ತಿ ಗೀತೆಗಳನ್ನು ನಿಲ್ಲಿಸದಿರುವ ಕುರಿತು ಮಂದಿರದ ಅಧಿಕಾರಿಗಳ ಜತೆ ಜಗಳಕ್ಕಿಳಿದರು.
 
ಜುಮ್ಮಾ ಪ್ರಾರ್ಥನೆಗಳಿಗೆ ಮುಂಚೆ ಮುಸ್ಲಿಂ ಭಕ್ತರು ಮಂದಿರಕ್ಕೆ ತೆರಳಿ ಭಕ್ತಿ ಗೀತೆಗಳನ್ನು ನಿಲ್ಲಿಸುವಂತೆ ಕೇಳಿದರು. ಆದರೆ ಅದು ನಿಲ್ಲದಿದ್ದಾಗ ಅವರು ಜಗಳಕ್ಕೆ ನಿಂತರು.
 
ಒಂದು ಹಂತದಲ್ಲಿ ಎರಡೂ ಕಡೆಯವರು ಇಟ್ಟಿಗೆಗಳನ್ನು ಪರಸ್ಪರ ತೂರಿದ್ದರಿಂದ 10 ಜನರಿಗೆ ಗಾಯಗಳಾಯಿತು. ಆದಾಗ್ಯೂ, ಇಸ್ಕಾನ್ ಪ್ರಿನ್ಸಿಪಾಲ್ ಬ್ರಹ್ಮಚಾರಿ ಭೂವಿವಾದದ ಕಾರಣದಿಂದ ಸಂಘರ್ಷ ಉಂಟಾಗಿದೆ ಎಂದು ಹೇಳಿದರು.
 
ಇಸ್ಕಾನ್ ಭೂಮಿಯನ್ನು ಅಕ್ರಮ ಒತ್ತುವರಿ ಮಾಡಿದ್ದ ಸ್ಥಳೀಯರು ಮೈಕ್ರೋಫೋನ್ ಬಳಸಿ ಸಮೀಪದ ಮಸೀದಿ ಬಳಿ ಜುಮ್ಮಾ ಪ್ರಾರ್ಥನೆ ವೇಳೆ ಮುಸ್ಲಿಂ ಭಕ್ತರಿಗೆ ದಾಳಿಗೆ ಪ್ರಚೋದಿಸಿದರು ಎಂದು ಗೌರಂಗಾ ದಾಸ್ ತಿಳಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ