ಅಫ್ಘನ್‌ನಲ್ಲಿ ಉಗ್ರರ ಅಟ್ಟಹಾಸ; 2 ಬಲಿ, 100ಕ್ಕೂ ಹೆಚ್ಚು ಜನರಿಗೆ ಗಾಯ

ಶುಕ್ರವಾರ, 11 ನವೆಂಬರ್ 2016 (12:07 IST)
ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ, ಜರ್ಮನ್ ರಾಯಭಾರ ಕಚೇರಿ ಮೇಲೆ ತಾಲಿಬಾನ್ ಉಗ್ರರು ಗುರುವಾರ ದಾಳಿ ನಡೆಸಿದ್ದು ಕನಿಷ್ಠ 2 ಸತ್ತು, 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಕಾಬೂಲಿನ ಮಝರ್- ಇ- ಷರೀಫ್ ನಗರದಲ್ಲಿರುವ ಜರ್ಮನ್ ರಾಯಭಾರ ಕಚೇರಿಯ ಕೌಂಪೌಂಡ್ ಬಳಿ ಉಗ್ರನೊಬ್ಬ ಕಾರ್ ಬಾಂಬ್ ಸ್ಪೋಟಿಸಿದ್ದಾನೆ. ಪರಿಣಾಮ ಸ್ಥಳದಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದು 100ಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
 
ಕಾರಿನಲ್ಲಿ ಅಪಾರ ಪ್ರಮಾಣದ ಸ್ಪೋಟಕಗಳನ್ನು ತುಂಬಿಕೊಂಡು ಜರ್ಮನ್ ರಾಯಭಾರ ಕಚೇರಿಯೊಳಗೆ ನುಗ್ಗಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
 
ದಾಳಿಯ ಹೊಣೆ ಹೊತ್ತಿರುವ ತಾಲಿಬಾನ್, ಅಮೇರಿಕ ನೇತೃತ್ವದ ಮಿತ್ರಪಡೆಗಳು ಈ ತಿಂಗಳ ಆರಂಭದಲ್ಲಿ ಕುಂಡೂಜ್‌ನಲ್ಲಿ ನಡೆಸಿದ ವಾಯುದಾಳಿಯ ಪ್ರತೀಕಾರವಾಗಿ ಈ ವಿಧ್ವಂಸಕ ಕೃತ್ಯವನ್ನು ನಡೆಸಿದ್ದೇವೆ ಎಂದು ಹೇಳಿದೆ.ಅಮೇರಿಕಾ ನಡೆಸಿದ ಈ ದಾಳಿಯಲ್ಲಿ ಹಲವು ಉಗ್ರರು ಮತ್ತು 32 ನಾಗರಿಕರು ದುರ್ಮರಣವನ್ನಪ್ಪಿದ್ದರು.
 
ಅದೃಷ್ಟವಶಾತ್ ರಾಯಭಾರ ಕಚೇರಿ ಅಧಿಕಾರಿಗಳು ಈ ಯಾವುದೇ ಸಮಸ್ಯೆಯಿಲ್ಲದೇ ಪಾರಾಗಿದ್ದು, ಕಟ್ಟಡಗಳಿಗೂ ಹಾನಿಯಾಗಿದೆ ಎಂದು ತಿಳಿದು ಬಂದಿದೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ